ಭಾರತೀಯರಿಗೆ ಶಾಕ್ ಕೊಟ್ಟ ವಾಟ್ಸಾಪ್

ನವೆಂಬರ್ 2022ರಲ್ಲಿ ವಾಟ್ಸಾಪ್ ಲಕ್ಷಾಂತರ ಭಾರತೀಯ ಖಾತೆಗಳನ್ನ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ನಿಷೇಧಿಸಿದೆ. ಇತ್ತೀಚಿನ ವರದಿಯ ಪ್ರಕಾರ, ನ.1 ರಿಂದ 30, 2022ರ ನಡುವೆ 37 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನ ನಿಷೇಧಿಸಲಾಗಿದೆ. ಗ್ರಾಹಕರನ್ನ ಸುರಕ್ಷಿತವಾಗಿರಿಸಲು ನಾವು ನಿರಂತರವಾಗಿ ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನಿಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಹಾನಿಕಾರಕ ಚಟುವಟಿಕೆಗಳನ್ನ ಮೊದಲ ಹಂತದಲ್ಲೇ ನಿಲ್ಲಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸಂಸ್ಥೆ ಹೇಳಿದೆ.