ಸದಾರಮೆ ನಾಟಕವಾಡುವ ಹೆಚ್‌ಡಿಕೆಯಿಂದ ನಂದಿನಿ ಬಗ್ಗೆ ಸುಳ್ಳು ಸುದ್ದಿ: ಬಿಜೆಪಿ

ಸದಾರಮೆ ನಾಟಕವಾಡುವ ಹೆಚ್‌ಡಿಕೆಯಿಂದ ನಂದಿನಿ ಬಗ್ಗೆ ಸುಳ್ಳು ಸುದ್ದಿ: ಬಿಜೆಪಿ

ಬೆಂಗಳೂರು: ನಂದಿನಿ ವಿಲೀನದ ಬಗ್ಗೆ ಯಾರೂ ಏನು ಹೇಳದಿದ್ದರೂ, ಯಾವತ್ತೂ ಇಲ್ಲದ ಕನ್ನಡ ಪ್ರೇಮ ತೋರಿಸಲು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಸುಳ್ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದಾರೆ. ಸದಾ ಕಾಲ ಸದಾರಮೆ ನಾಟಕವಾಡುವ ಹೆಚ್‌ಡಿಕೆ ಕನ್ನಡಿಗರ ಬಗ್ಗೆ ಎಷ್ಟು ಕಾಳಜಿ ತೋರಿದ್ದಾರೆ ಅನ್ನೋದು ಎಲ್ಲರಿಗೂ ಅರಿವಿದೆ. ಮಂಡ್ಯದ ಮೈಶುಗರ್ ಮುಚ್ಚಿದ ಕಥೆ, 8000 ಕೋಟಿ ರೂ.ಗಳ ಮೊತ್ತದ ಯೋಜನೆಗಳ ಗಾಳಿಪಟ ಹಾರಿಸಿದ ಕಥೆ. ಇವುಗಳ ನೈಜ ಚಿತ್ರಣದ ಅರಿವಿರದ ಕನ್ನಡಿಗರೇ ಇಲ್ಲ ಎಂದಿದೆ.