ಸಹೋದರನ ಹೆಸರಿನಲ್ಲಿ ದತ್ತಿದಾನ- ಸಚಿವ ಮುನೇನಕೊಪ್ಪ ವಾಗ್ದಾನ

ಅಣ್ಣಿಗೇರಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿದೆ. ಕನ್ನಡಕ್ಕಾಗಿ ನಡೆಯುವ ಕೆಲಸ ಕಾರ್ಯಗಳನ್ನು ಮಾಡಲು ಸರ್ಕಾರ ನಿಮ್ಮ ಪರವಾಗಿ ಇರುತ್ತದೆ ಅಂತಾ   ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಹೇಳಿದ್ರು.ಅಣ್ಣಿಗೇರಿ ತಾಲೂಕು ಕಸಾಪ ಪದಾಧಿಕಾರಿಗಳ ಪದಸ್ವೀಕಾರ  ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದ್ರು.ಇದೇ ವೇಳೆ ಕನ್ನಡಸಾಹಿತ್ಯ ಪರಿಷತ್ತಿಗೆ ಹಿರಿಯ ಸೋದರ ಹನುಮಂತ ಗೌಡ್ರ ಹೆಸರಿನಲ್ಲಿ ದತ್ತಿ ದಾನ ಕೊಡುವುದಾಗಿ ಸಚಿವರು   ವಾಗ್ದಾನ ಮಾಡಿದ್ರು.ಈ ಸಂದರ್ಭದಲ್ಲಿ ದಾಸೋಹಮಠದ ಶಿವಕುಮಾರ ಸ್ವಾಮೀಜಿ,ವಾಲಿ ಮಹಾರಾಜರು,ನೂತನ ಅಧ್ಯಕ್ಷ ರವಿರಾಜ ವೆರ್ಣೇಕರ ಸೇರಿದಂತೆ ಪದಾಧಿಕಾರಿಗಳೆಲ್ಲ ಉಪಸ್ಥಿತರಿದ್ರು.