ತಾಯಿಯಾಗುವ ಸಂಭ್ರಮದಲ್ಲಿ ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ | Bengaluru |

ಚೆಲುವಿನ ಚಿತ್ತಾರದ ಬೆಡಗಿ, ಗೋಲ್ಡನ್ ಕ್ವೀನ್ ಅಮೂಲ್ಯ ಜಗದೀಶ್, ತಾಯಿಯಾಗುವ ಸಂಭ್ರಮದಲ್ಲಿದ್ದು, ಖುದ್ದಾಗಿ ಇನ್ಸ್ಟಾಗ್ರಾಮ್ನಲ್ಲಿ ಅವರೇ ಹೇಳಿಕೊಂಡಿದ್ದಾರೆ.ಜಗದೀಶ್ ಜೊತೆಗಿನ ಬೇಬಿ ಶೋವರ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಅಮೂಲ್ಯ ನಾವು ಈಗ ಇಬ್ಬರಲ್ಲ ಎಂದು ಹೇಳುವ ಮೂಲಕ ಫ್ಯಾಮಿಲಿ ಗೋಯಿಂಗ್, ಎಜೆಹ್ಯಾಪಿನೆಜ್, ಜಗದೀಶ್ಆರ್ ಚಂದ್ರ ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ 2022ರ ವೇಳೆಗೆ ಹೊಸಬರನ್ನು ಬರಮಾಡಿಕೊಳ್ಳುವ ಖುಷಿಯನ್ನು ಹಂಚಿಕೊಂಡಿದ್ದಾರೆ.ಬಾಲ್ಯ ನಟಿಯಾಗಿ ಸ್ಯಾಂಡಲ್ವುಡ್ಗೆ ಬಂದ ಅಮೂಲ್ಯ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಪೂರ್ಣ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಂಡರು. ಅಲ್ಲಿಂದ ಶ್ರಾವಣಿ ಸಂಭ್ರಮ, ಗಜಕೇಸರಿ, ಮಾಸ್ತಿಗುಡಿ, ಮದುವೆಯ ಮಮತೆಯ ಕರೆಯೋಲೆ, ಮುಗುಳು ನಗೆ, ಪ್ರೇಮಿಸಂ ಹೀಗೆ ಸಾಲುಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದರು.ಇವರ ಈ ಪೋಸ್ಟ್ ಅನ್ನು ಸಾವಿರಾರು ಮಂದಿ ಇಷ್ಟಪಟ್ಟಿದ್ದು, ಅಮೂಲ್ಯರಿಗೆ ನಟ, ನಟಿಯರಿಂದ ಶುಭಾಶಯದ ಸುರಿಮಳೆಯೇ ಹರಿದು ಬರುತ್ತಿದೆ. 2017ರಲ್ಲಿ ಉದ್ಯಮಿ ಜಗದೀಶ್ ಜೊತೆಗೆ ಸಪ್ತಪದಿ ತುಳಿದ ನಟಿ ಅಮೂಲ್ಯ ಅವರು ಮದುವೆಯ ನಂತರ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸದೆ ಇರುವುದು ಅಭಿಮಾನಗಳಲ್ಲಿ ಕೊಂಚ ಬೇಸರ ಮೂಡಿಸಿದೆ.