ಸಂಬಳಕ್ಕೆ ಆಗ್ರಹಿಸಿ ನೌಕರನ ಆಹೋರಾತ್ರಿ ಪ್ರತಿಭಟನೆ

ಗಾಂಧಿ ಜಯಂತಿ ಹಿಂದಿನ ದಿನವೇ ಗಾಂಧಿಜಿ ಅಂಬೇಡ್ಕರ್ ಫೆÇೀಟೋ ಇರಿಸಿ ಗ್ರಾಮಪಂಚಾಯ್ತಿ ನೌಕರ ಅಹೋರಾತ್ರಿ ಪ್ರತಿಭಟನೆ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮಪಂಚಾಯತಿಯಲ್ಲಿ ನಡೆದಿದೆ. ಕಳೆದ ನಾಲ್ಕು ವರ್ಷದಿಂದ ಸಂಬಳ ಸಿಗದ ಕಾರಣ ಗ್ರಾಮಪಂಚಾಯ್ತಿ ಮುಂದೆ ಗಾಂಧಿ ಜಯಂತಿ ಹಿಂದಿನ ದಿನ ಗಾಂಧಿ ಮತ್ತು ಅಂಭೆಡ್ಕರ್ ಭಾವಚಿತ್ರ ಇರಿಸಿ ಕೋಟೆಕೆರೆ ಗ್ರಾಮಪಂಚಾಯತಿಯ ನೀರುಗಂಟಿ ವಿಠಲ್ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ವಾಟರ್ ಮನ್ ಆಗಿರುವ ವಿಠಲ್ ನನ್ನ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.