ಅರವಿಂದ ಬೆಲ್ಲದ ಕಾಂಗ್ರೆಸ್ ಸೇರ್ಪಡೆ ಆಗ್ತಾರ?

ಹುಬ್ಬಳ್ಳಿ-ಧಾರವಾಡ 74 ರ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬುವುದು ಸುದ್ದಿ ಕೇಳಿ ಬರುತ್ತಿದ್ದ ಬೆನ್ನಲ್ಲೇ ಕೈ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ವಿರುದ್ಧ ವ್ಯಕ್ತಪಡಿಸಿದ್ದಾರೆ. ಹೌದು ಧಾರವಾಡ 74ರ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂದು ಗಾಳಿ ಸುದ್ದಿ ಹರಿದಾಡಿತ್ತಿದ್ದು.ಅದ್ರಂತೆ ಶಾಸಕ ಅರವಿಂದ ಬೆಲ್ಲದ ಕೂಡಾ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ ಅವರನ್ನು ಭೇಟಿ ಮಾಡಿರೋ ಗುಮಾನಿ ಹೆಚ್ಚಾಗಿದೆ. ಬೆಲ್ಲದ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ ಮುಖಂಡರ ಮುನಸು ಹೆಚ್ಚಾಗಿದ್ದು, ಅದ್ರಲ್ಲಿ ಕೈ ಕಾರ್ಯಕರ್ತರಿಂದ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಧಾರವಾಡ 74 ರ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಸೇರ್ತಾರಾ ಕಾಂಗ್ರೆಸ್ ಎಂಬುವುದು ಎಕ್ಷೇ ಪಶ್ನೇ ಆಗಿದೆ. ಇನ್ನು ನವಲಗುಂದ ಶಾಸಕ ಎನ್.ಎಚ್ ಕೋನರಡ್ಡಿ ಕಾಂಗ್ರೆಸ್ ಸೇರ್ಪಡೆ ಖಚಿತವಾಗಿದ್ದು. ಜೆಡಿಎಸ್, ಬಿಜೆಪಿ ಶಾಸಕರು ಕೈ ಮುಖಂಡರ ಭೇಟಿ ಮಾಡಿರೋ ಹಿನ್ನೆಲೆಯಾಗಿ ಧಾರವಾಡ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಎದುರಾದಿದೆ. ಕೈ ಪಡೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ತೋರುತ್ತಿರುವ ವ್ಯಕ್ತಿವಾಗಿದೆ.