ಚುನಾವಣೆಗೆ ಜನಾರ್ದನ ರೆಡ್ಡಿ ಭರ್ಜರಿ ಸಿದ್ಧತೆ : ಕಾರ್ಯಕರ್ತರಿಗೆ 100 ಬೈಕ್, ದುಬಾರಿ ಮೊಬೈಲ್ ವಿತರಣೆ!

ಚುನಾವಣೆಗೆ ಜನಾರ್ದನ ರೆಡ್ಡಿ ಭರ್ಜರಿ ಸಿದ್ಧತೆ : ಕಾರ್ಯಕರ್ತರಿಗೆ 100 ಬೈಕ್, ದುಬಾರಿ ಮೊಬೈಲ್ ವಿತರಣೆ!

ಳ್ಳಾರಿ : ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಜನಾರ್ದನ ರೆಡ್ಡಿ ಅವರು ಈಗಾಗಲೇ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪಿಸಿದ್ದು, ಇದೀಗ ಕಾರ್ಯಕರ್ತರಿಗೆ 100 ಬೈಕ್ ಗಳನ್ನು ವಿತರಿಸಲು ಮುಂದಾಗಿದ್ದಾರೆ.

ಹೌದು, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಳ್ಳಾರಿ, ಗಂಗಾವತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ 100 ಪ್ರಮುಖ ಕಾರ್ಯಕರ್ತರಿಗೆ ಬೈಕ್ ಗಳನ್ನು ನೀಡಲು ನಿರ್ಧರಿಸಿದ್ದು, ಟಿವಿಎಸ್ ಸ್ಪೋರ್ಟ್ಸ್ ಬೈಕ್ ಗಳಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ, ಗಾಲಿ ಜನಾರ್ದನ ರೆಡ್ಡಿ ಹೆಸರು ಹಾಗೂ ಪಕ್ಷದ ಬಾವುಟದ ಬಣ್ಣ ಬಳಸಿ ಈ ಬೈಕ್ ಅನ್ನು ತಯಾರಿಸಲಾಗಿದೆ.

ಇನ್ನು ಪಕ್ಷದ ಕಾರ್ಯಕರ್ತರಿಗೆ ದುಬಾರಿ ಬೆಲೆಯ ಮೊಬೈಲ್ ನೀಡಲು ಜನಾರ್ದನ ರೆಡ್ಡಿ ನಿರ್ಧರಿಸಿದ್ದು, ಮೊಬೈಲ್ ವಿತರಣೆ ವೇಳೆಯಲ್ಲೇ ಒಂದು ವರ್ಷದ ಕರೆನ್ಸಿ ಸಹ ಹಾಕಿಸಲಿದ್ದಾರೆ ಎನ್ನಲಾಗಿದೆ.