ರಾಮನಗರದಲ್ಲಿ ಸ್ಯಾಂಟ್ರೋ ರವಿ ಕಾರು ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು

ರಾಮನಗರ : ವಂಚಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಇದೀಗ ರಾಮನಗರದಲ್ಲಿ ಸ್ಯಾಂಟ್ರೋ ರವಿ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ರಾಮನಗರದಲ್ಲಿ ಎಸ್ ಪಿ ಸಂತೋಷ್ ಬಾಬು ನೇತೃತ್ವದ ತಂಡದಿಂದ ಸ್ಯಾಂಟ್ರೋ ರವಿ ಕಾರು ಚಾಲಕ ಗಿರೀಶ್ ನನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ನಾಪತ್ತೆಯಾಗಿರುವ ಸ್ಯಾಂಟ್ರೋ ರವಿಗಾಗಿ ಪೊಲೀಸರು ಬಲೆ ಬೀಸಿದ್ದು, ರಾಮನಗರ ಪೊಲೀಸರ ನೆರವು ಪಡೆದು ಸ್ಯಾಂಟ್ರೋ ರವಿಗಾಗಿ ಶೋಧ ನಡೆಸಿದ್ದಾರೆ.