ಗದಗದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿಕೆ

ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ, 18 ವಿಧಾನ ಪರಿಷತ್ ಸ್ಥಾನದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. 25 ವಿಧಾನ ಪರಿಷತ್ ಕ್ಷೇತ್ರಗಳ ಪೈಕಿ‌, 20 ಕ್ಷೇತ್ರದಲ್ಲಿ ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಗದಗನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎರಡು ಕ್ಷೇತ್ರ ಇದ್ದಲ್ಲಿ ಒಬ್ಬರನ್ನು ಮಾತ್ರ ಕಣಕ್ಕೆ ಇಳಿಸುತ್ತೇವೆ.ಪರಿಷತ್ ಚುನಾವಣೆ ಮುಗಿದ ಮೇಲೆ, ವಿಧಾನ ಪರಿಷತ್ ನಲ್ಲಿ ನಮಗೆ ಬಹುಮತ ಸಿಗುತ್ತೇ. ವಿಧಾನ ಪರಿಷತ್ ನಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡ್ತಾಯಿದ್ದೇನೆ ಎಂದರು. ರಾಜ್ಯದಲ್ಲಿ ಮಳೆ ಅವಾಂತರ ಬಹಳ ನೋವು ತಂದಿದೆ, ಬಹುತೇಕ ಎಲ್ಲಾ ಬೆಳೆಗಳು ನಾಶವಾಗುತ್ತಿವೆ. ಹಿಂದಿನಕ್ಕಿಂತಲ್ಲೋ ಅತೀ ಹೆಚ್ಚು ಬೆಳೆ ನಾಶವಾಗಿದೆ. ನಾನು ನೋಡಿಕೊಂಡು ಬಂದಿದ್ದೇನೆ, ಕೇಂದ್ರದ ವಿಶೇಷ ತಂಡ ಬಂದು ಪರಿಶೀಲನೆ ಮಾಡಿದ್ರೆ ಅನುಕೂಲವಾಗುತ್ತದೆ. ಇನ್ನು ಬಿಟ್ ಕ್ವಾಯಿನ್ ಪ್ರಕರಣವಾಗಿ, ಬಿಟ್ ಕ್ವಾಯಿನ್ ಹಗರಣದ ಕುರಿತು ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಈಗಾಲೇ ಸಿಎಂ ಹೇಳಿದ್ದಾರೆ, ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರು ಕ್ರಮವಾಗುತ್ತದೆ. ಬಿಟ್ ಕ್ವಾಯಿನ್ ಪ್ರಕರಣ ಕುರಿತು ಮಾಹಿತಿ ಇದ್ರೆ ನೀಡಿ. ಯಾವುದೇ ಪಕ್ಷದವರು ಇದ್ರು ಅವರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಮೂರು ಕೃಷಿ ಕಾಯ್ದೆ ವಾಪಸ್ ತೆಗೆದುಕೊಂಡ ಕೇಂದ್ರದ ನಿರ್ಧಾರ ಸ್ವಾಗತಿಸಿದೆ. ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ರು. ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಯಾವತ್ತು ತಲೆ ಕೆಡಿಸಿಕೊಂಡಿಲ್ಲಾ. ಇನ್ನೂ 20-25 ವರ್ಷ ಪ್ರಧಾನಿ ಮೋದಿಯನ್ನು ಅಲೆಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ರೈತ ಪರ ಚಿಂತನೆ ಯಿಂದಾಗಿ ಕಾಯ್ದೆ ವಾಪಾಸ್ಸ್ ಪಡೆದಿದ್ದಾರೆ.ಇದನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಬಿಎಸ್‌ವೈ ಹೇಳಿದರು