ಹೊಟ್ಟೆ ಬಾಗ ಜೋಡಣೆಯಿಂದ ಜನಿಸಿದ ಅಪರೂಪದ ಅವಳಿ ಮಕ್ಕಳು

ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ಅಪರೂಪದ ಅವಳಿ ಮಕ್ಕಳ ಜನನ ಆಗಿದೆ, ಹೌದು ಧಾರವಾಡ ತಾಲ್ಲೂಕಿನ ಮುಮ್ಮಿಗಟ್ಟಿ ಗ್ರಾಮದ ಪ್ರಿಯಾಂಕ ಚಿಕ್ಕನವರ ಎಂಬುವರಿಗೆ ಮಂಗಳವಾರ ಬೆಳಿಗ್ಗೆ 4 ಗಂಟೆಗೆ ಸಿಜರಿನ್ ಮಾಡುವ ಮೂಲಕ ಎಸ್.ಡಿ.ಎಮ್.ಆಸ್ಪತ್ರೆ ವೈದ್ಯರು ಹೆರಿಗೆ ಮಾಡಿಸಿಕೊಂಡಿದ್ದರು. ಜನಿಸಿದ ಅವಳಿ ಗಂಡು ಮಕ್ಕಳ ಎದೆ ಭಾಗ ಸಂಪೂರ್ಣ ಒಂದಕ್ಕೊಂದು ಜೋಡನೆಯಾಗಿದ್ದವು. ಜನಿಸಿದ ಒಂದು ಗಂಟೆಯವರೆಗೆ ಬದುಕುಳಿದ ಮಕ್ಕಳು ನಂತರ ಅಸುನಿಗಿದವವು. ಸದ್ಯ ತಾಯಿ ಆರೋಗ್ಯವಾಗಿದ್ದಾರೆ.