ಭಕ್ತ ಶ್ರೇಷ್ಠ ಕನಕದಾಸರ ಜಯಂತಿ

ನಗರದ ಪ್ರತಿಷ್ಠಿತ ಜನತಾ ಶಿಕ್ಷಣ ಸಮಿತಿಯ ಕೆ.ಎಚ್.ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು..ಈ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷೇತರ ಸಿಬ್ಬಂದಿ, ಕಚೇರಿಯ ಹಾಗೂ ಸಂಸ್ಥೆಯ ಸಮಸ್ತ ಸಿಬ್ಬಂದಿಯವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಗೌರವ ನಮನವನ್ನು ಸಲ್ಲಿಸಿದ್ರು.ಅನಂತರ ಪ್ರಾಚಾರ್ಯ ವಿ.ಎನ್.ದೇಸಾಯಿ ಮಾತನಾಡಿ, ಕನಕದಾಸರು ವಿನೀತ ಭಾವದಿಂದ ಶ್ರೀ ಹರಿಯನ್ನು ಸ್ಮರಿಸಿ ಸರ್ವಸ್ವನ್ನು ಹರಿಯ ಪಾದಪದ್ಮಗಳಿಗೆ ಅರ್ಪಿಸಿಕೊಂಡು, ಜೀವನದ ನಿಜ ಮರ್ಮವನ್ನು ಜಗತ್ತಿಗೆ ತಿಳಿಸಿದ ದಾರ್ಶನಿಕ ಸಂತರು ಎಂದು ಹೇಳುತ್ತಾ, ತಮ್ಮ ನಿರ್ಮಲವಾದ ಭಕ್ತಿಯಿಂದ ಶ್ರೀ ಕೃಷ್ಣ ಪರಮಾತ್ಮನನ್ನು ಕೃಪೆಗೆ ಪಾತ್ರರಾದ ಮಹಾಮಹಿಮ ಸಂತರಾಗಿದ್ದರು ಹಾಗೂ ಆಗಿನ ಕಾಲದ ಜಾತಿ ಪದ್ದತಿಯ ತಾರತಮ್ಯಗಳನ್ನು ತಮ್ಮ ಕೀರ್ತನೆಗಳಿಂದ ಸಮಾನತೆಯ ಸಂದೇಶ ಸಾರಿದ ಭಕ್ತ ಶ್ರೇಷ್ಠರಾಗಿದ್ದರು ಎಂದು ಹೇಳಿದರು.