ಪ್ರಧಾನಿ ಮೋದಿ ಅವರಿಗೆ ರೈತ ಸಂಘಟನೆಗಳಿಂದ ಧನ್ಯವಾದಗಳು
ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಮೂರು ಕೃಷಿ ಕಾಯ್ದೆಯನ್ನು ವಾಪಸ್ ಹಿಂಪಡೆಯುವಂತೆ ರೈತ ಸಂಘಟನೆಗಳು ದೇಶಾದ್ಯಂತ ಹೋರಾಟ ನಡೆಸಿದ್ದಕ್ಕೆ, ಇಂದು ಜಯ ಸಿಕ್ಕಿದೆ ಎಂದು ರೈತರು ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು ತಿಳಿಸಿದ್ದಾರೆ. ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ರೈತ ವಿರೋಧಿ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತ ಸಂಘಟನೆಗಳು ಅಭಿನಂದನೆ ಕೋರಿದರು. ಇನ್ನು ಈ ಹೋರಾಟದ ಯಶಸ್ವಿಗಾಗಿ ಬಲಿದಾನವಾದ ರೈತ ಮುಖಂಡರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತವೆ. ಈ ದಿನ ದೇಶದ ರೈತರಿಗೆ ಸಂತಸದ ದಿನವಾಗಿದೆ ಕೇಂದ್ರ ಸರ್ಕಾರದ ಹಠಮಾರಿ ಧೋರಣೆಯನ್ನು ಮಣಿಸಿ ದೇಶದ ಶ್ರಮ ಜೀವಿಗಳು. ದೆಹಲಿ ರೈತರ ಹೋರಾಟದಲ್ಲಿ ಭಾಗವಹಿಸಿದ ದೇಶದ ಎಲ್ಲಾ ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ,ಎಲ್ಲ ರೈತ ಸಂಘಟನೆ ಮತ್ತು ವಿವಿಧ ಸಂಘಟನೆಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ರು...