ಸಿನಿಮಾಲ್ : ವೇದ 50 ದಿನದ ಆನಂದ
ಶಿವರಾಜಕುಮಾರ್ ಅಭಿನಯದ 125ನೇ ಚಿತ್ರ 'ವೇದ'. ಈ ಚಿತ್ರವನ್ನು ಗೀತಾ ಶಿವರಾಜಕುಮಾರ್ ನಿರ್ಮಿಸಿದ್ದು, ಹರ್ಷ ನಿರ್ದೇಶಿಸಿದ್ದಾರೆ. ಚಿತ್ರ ತೆರೆಕಂಡು ಯಶಸ್ವಿಯಾಗಿ ಐವತ್ತು ದಿನಗಳನ್ನು ಪೂರೈಸಿದ ಸಂಭ್ರಮವನ್ನು ನಿರ್ಮಾಪಕಿ ಗೀತಾ ಅವರು ತಮ್ಮಮನೆಯಲ್ಲಿ ಆಚರಿಸಿಕೊಂಡರು.
ಇದನ್ನು ಸ್ವತಃ ಶಿವರಾಜಕುಮಾರ್ ನೆನಪಿಸಿಕೊಂಡು, ತಮ್ಮಅಭಿನಯ ಜೀವನಯಾನದಲ್ಲಿ ನೆರವಾದ ಎಲ್ಲರನ್ನೂ ಸ್ಮರಿಸಿಕೊಂಡರು. ಶಿವರಾಜಕುಮಾರ್ ಅಭಿನಯದ ನೂರನೇ ಚಿತ್ರದ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಿ, ಅವರ ಚಿತ್ರಗಳಲ್ಲಿ ಕೆಲಸ ಮಾಡಿದ ಸಹಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ಪ್ರದರ್ಶಕರು, ವಿತರಕರು. ಹೀಗೆ ಎಲ್ಲರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಗೀತಾ ಶಿವರಾಜಕುಮಾರ್. 125ನೇ ಚಿತ್ರದ 50ನೇ ದಿನ ಸಮಾರಂಭವನ್ನು ತಮ್ಮ ಮನೆಯಲ್ಲಿ ಏರ್ಪಡಿಸಿದ್ದರು