SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ ಶಿಕ್ಷಣ ಸಚಿವ B.C.Nagesh

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ ಶಿಕ್ಷಣ ಸಚಿವ B.C.Nagesh

ಪ್ರತಿ ವರ್ಷ 240 ಕ್ಕೂ ಹೆಚ್ಚು ಬೋಧನೆ ದಿನಗಳು ಸಿಗುತ್ತಿತ್ತು.ಆದ್ರೆ ಈ ವರ್ಷ ತಡವಾಗಿ ಶಾಲೆ ಆರಂಭ ಹಿನ್ನೆಲೆ 140ಕ್ಕಿಂತ ಕಡಿಮೆ ದಿನಗಳ ಅವಧಿ ಸಿಕ್ಕಿದೆ. ಶಿಕ್ಷಕರು ಒತ್ತಡದಲ್ಲಿ ಬೇಗ ಬೇಗ ಪಠ್ಯ ಮುಗಿಸಲು ಮುಂದಾಗಿದ್ದರು, ಇದು ಸರ್ಕಾರದ ಗಮನಕ್ಕೆ ಬಂದಿತ್ತು.ಕಡಿಮೆ ಸಮಯ ಅಂತಾ ಶಿಕ್ಷಕರು ದಿನಕ್ಕೊಂದು ಪಾಠ ಮುಗಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಒತ್ತಡದಿಂದ ಪಾಠ ಸರಿಯಾಗಿ ಅರ್ಥವಾಗುತ್ತಿಲ್ಲ. ಶಿಕ್ಷಕರು ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಪ್ರಯೋಗಿಕ ಪಾಠ ಕಡಿತ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.ಅತಿ ವೇಗವಾಗಿ ಪಠ್ಯ ಕಂಪ್ಲೀಟ್ ಮಾಡುವಂತಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯ ಅರ್ಥವಾಗುತ್ತಿಲ್ಲ. ಹೀಗಾಗಿ ಪಠ್ಯ ಕಡಿತ ಮಾಡುವಂತೆ SSLC ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒತ್ತಾಯಿಸಿದ್ದರು.ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಪಠ್ಯ ಕಡಿತಕ್ಕೆ ಮುಂದಾಗಿದ್ದಾರೆ. ಇಂದು ತಜ್ಞರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇಂದೇ ಶಿಕ್ಷಣ ಇಲಾಖೆಯ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ.ಈ ಬಾರಿ SSLC ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಶೇ. 20 ಪಠ್ಯ ಕಡಿತಕ್ಕೆ ಶಿಕ್ಷಣ ಸಚಿವರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಶೇ. 20 ಪಠ್ಯ ಕಡಿತ ಶೇ 80% ರಷ್ಟು ಪಠ್ಯ ಬೋಧನೆಯನ್ನು ಶಿಕ್ಷಕರು ಮಾಡಲಿದ್ದಾರೆ. ಶೇ 80% ರಷ್ಟು ಪಠ್ಯ ವಿಷಯಕ್ಕೆ ಮಾತ್ರ ಇರಲಿದೆ ಎಸ್‌ಎಸ್‌ಎಲ್ ಸಿ ಪರೀಕ್ಷೆಗಳು ನಡೆಯಲಿವೆ ಎಂಬ ಮಾಹಿತಿ ಲಬ್ಯವಾಗಿದೆ.