ನ.3 ರಿಂದ ನ.6 ರವರೆಗೆ ಜಿಕೆವಿಕೆಯಲ್ಲಿ 'ಕೃಷಿಮೇಳ-2022' ಭರ್ಜರಿ ಸಿದ್ಧತೆ | GKVK Krishi Mela-2022

ನ.3 ರಿಂದ ನ.6 ರವರೆಗೆ ಜಿಕೆವಿಕೆಯಲ್ಲಿ 'ಕೃಷಿಮೇಳ-2022' ಭರ್ಜರಿ ಸಿದ್ಧತೆ | GKVK Krishi Mela-2022

ಬೆಂಗಳೂರು: ನ.3ರಿಂದ ನ.6ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಕೃಷಿ ಜಾತ್ರೆ ನಡೆಯಲಿದೆ. ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ ಸೇರಿ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೆಂಗಳೂರು ಕೃಷಿ

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿವಿ ಕುಲಪತಿ ಕೆ. ನಾರಾಯಣಗೌಡ, ಕೃಷಿ ವಿವಿ ಹೊಸದಾಗಿ ಅಭಿವೃದ್ಧಿ ಪಡಿಸಿರುವ ಭತ್ತ, ಮುಸುಕಿನ ಜೋಳ, ಅವರೆ ಸೇರಿ 9 ತಳಿಗಳನ್ನು ಮೇಳದಲ್ಲಿ ಬಿಡುಗಡೆ ಮಾಡಲಾಗುವುದು.

ಕೃಷಿ ಸಾಧಕರಿಗೆ ಪುರಸ್ಕಾರ, ಜಿಲ್ಲಾ ಮತ್ತು ತಾಲೂಕು ಮಟ್ಟದ ರೈತ ಪ್ರಶಸ್ತಿ. ಕೃಷಿ ವಸ್ತು ಪ್ರದರ್ಶನ ಮಳಿಗೆಗಳು, ಕೃಷಿ ಸಂಬಂಧಿಸಿದ ವಿಷಯಗಳ ಬಗ್ಗೆ ವಿಚಾರಗೋಷ್ಠಿಯಲ್ಲಿ ತಜ್ಞರು ಮಾತನಾಡಲಿದ್ದಾರೆ ಎಂದು ವಿವರಿಸಿದರು.

ವಿವಿಧ ತಳಿಯ ಹಸುಗಳು, ಕೋಳಿ, ಕುರಿಗಳು, ತರೇಹವಾರಿ ಹೂವುಗಳು, ತರಕಾರಿ, ಸಿರಿಧಾನ್ಯ, ಮಾವು, ಹಲಸು, ಟ್ರ್ಯಾಕ್ಟರ್​- ಟಿಲ್ಲರ್​, ಕೃಷಿ ಚಟುವಟಿಕೆಗಳನ್ನ ಕಣ್ತುಂಬಿಕೊಳ್ಳುತ್ತಾ ಕೃಷಿ ಜಾತ್ರೆಯಲ್ಲಿ ಮಿಂದೇಳಲು ಸಾವಿರಾರು ಜನ ಆಗಮಿಸುವ ನಿರೀಕ್ಷೆ ಇದೆ.

ವಿಶ್ವವಿದ್ಯಾಲಯ ವತಿಯಿಂದ 4 ದಿನಗಳ ಕಾಲ 'ಕೃಷಿಮೇಳ-2022' ನಡೆಯಲಿದ್ದು, ಭರದಿಂದ ಸಿದ್ಧತೆ ನಡೆಯುತ್ತಿದೆ.