ಬಡವರ ಬದುಕು ಕಸಿದ ಮಳೆರಾಯ... |Dharwad|

ಮಳೆಯಿಂದ ಬೆಳೆ ಅಷ್ಟೇ ಅಲ್ಲ, ಮನೆಗಳು ಕೂಡ ನೆಲಕಚ್ಚುತ್ತಿವೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜಿಲ್ಲೆಯಾದ್ಯಂತ ಅನೇಕ ಮನೆಗಳು ನೆಲಕಚ್ಚಿವೆ. ಧಾರವಾಡ ತಾಲೂಕಿನ ಮಾರಡಗಿ ಗ್ರಾಮದ ಸೈದುಸಾಬ್ ದರಗಾದ ಎಂಬುವವರ ಮನೆ ನಿನ್ನೆ ಸುರಿದ ಮಳೆಗೆ ನೆಲಕಚ್ಚಿದೆ. ಹೆಂಚಿನ ಮನೆ ಹೊಂದಿದ್ದ ಸೈದುಸಾಬ್ ಇದೀಗ ಮನೆ ಕಳೆದುಕೊಂಡು ಸಾಕಷ್ಟು ತೊಂದರೆಗೀಡಾಗಿದ್ದಾರೆ. ಇದೇ ರೀತಿ ಜಿಲ್ಲೆಯಾದ್ಯಂತ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಸರ್ಕಾರ ಪುನರ್ವಸತಿ ಕಲ್ಪಿಸಬೇಕಿದೆ....