ಕೆ ಎಚ್ ಕಬ್ಬೂರ್ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಸಂವಿಧಾನ ದಿನಾಚರಣೆ. | Dharwad |
ಧಾರವಾಡದ ಪ್ರತಿಷ್ಠಿತ ಜನತಾ ಶಿಕ್ಷಣ ಸಮಿತಿಯ ಕೆ ಎಚ್ ಕಬ್ಬೂರ್ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯ ವಸಂತ ದೇಸಾಯಿ ಅವರು ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಉಪನ್ಯಾಸಕರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು, ಕಚೇರಿ ಸಿಬ್ಬಂದಿಗಳು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ವಸಂತ್ ದೇಸಾಯಿ ಅವರು ಮಾತನಾಡಿ ದೇಶದ ಎಲ್ಲ ವರ್ಗದ ಜನರ ಧರ್ಮಗ್ರಂಥ ನಮ್ಮ ಸಂವಿಧಾನವಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಅವರು ಸ್ಮರಿಸಿದರು. ಸಂವಿಧಾನದ ಆಶಯದಂತೆ ನಾವು-ನೀವೆಲ್ಲರೂ ಸಹಬಾಳ್ವೆಯನ್ನು ನಡೆಸಿ ದೇಶದ ಪ್ರಗತಿಗೆ ಶ್ರಮಿಸೋಣ ಎಂದು ಕರೆ ನೀಡಿದರು.