ಮಲ್ಲೇಶ್ವರಂನಲ್ಲಿ ಸುಶಾಸನ ಮಾಸ: ಡಿ.24ರ 'ಮಧ್ಯರಾತ್ರಿ ವಾಕಥಾನ್'ಗೆ ನೋಂದಣಿ ಆರಂಭ

ಮಲ್ಲೇಶ್ವರಂನಲ್ಲಿ ಸುಶಾಸನ ಮಾಸ: ಡಿ.24ರ 'ಮಧ್ಯರಾತ್ರಿ ವಾಕಥಾನ್'ಗೆ ನೋಂದಣಿ ಆರಂಭ

ಬೆಂಗಳೂರು: ದಿವಂಗತ ಪ್ರಧಾನಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಡಿ.24ರ (ಶನಿವಾರ) ಮಧ್ಯರಾತ್ರಿ ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ವಾಕಥಾನ್ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಇಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಬುಧವಾರ ಈ ವಿಚಾರ ತಿಳಿಸಿರುವ ಅವರು, ಸಾವಿರಾರು ಜನ ಭಾಗವಹಿಸಲಿರುವ ಈ ವಾಕಥಾನ್ ಅಂದು ರಾತ್ರಿ 11 ಗಂಟೆಗೆ ಮಲ್ಲೇಶ್ವರಂ ಕ್ರೀಡಾಂಗಣದಿಂದ ಆರಂಭವಾಗಲಿದೆ. ನಂತರ ಇದು ಗುಟ್ಟಹಳ್ಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಯಾಂಕಿ ರಸ್ತೆ ಸ್ಕೈವಾಕ್, ಗೋಕಾಕ್ ಪಾರ್ಕ್, 18ನೇ ಅಡ್ಡರಸ್ತೆಯ ಸರಕಾರಿ ಕಾಲೇಜು ಮೂಲಕ ಸಾಗಲಿದೆ. ಬಳಿಕ ಚಂದ್ರಶೇಖರ್ ಆಜಾದ್ ಕ್ರೀಡಾಂಗಣದಲ್ಲಿ ಇದು ಕೊನಗೊಳ್ಳಲಿದೆ ಎಂದಿದ್ದಾರೆ.