ಡಿ.22| ರಾಷ್ಟ್ರೀಯ ಗಣಿತ ದಿನ

ಡಿ.22| ರಾಷ್ಟ್ರೀಯ ಗಣಿತ ದಿನ

ಗಣಿತಶಾಸ್ತ್ರಕ್ಕೆ ಮಹತ್ವದ ಕೊಡುಗೆ ಸಲ್ಲಿಸಿದ ಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದವಾದ ಡಿಸೆಂಬರ್ 22ರಂದು ಪ್ರತಿ ವರ್ಷ "ರಾಷ್ಟ್ರೀಯ ಗಣಿತ ದಿನ"ವನ್ನು ಆಚರಿಸಲಾಗುತ್ತದೆ. 2012ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ರಾಮಾನುಜನ್ ಅವರು ಡಿ.22, 1887ರಲ್ಲಿ ತಮಿಳುನಾಡಿನ ಈರೋಡ್‍ನಲ್ಲಿ ಜನಿಸಿದರು. ಗಣಿತ ಕ್ಷೇತ್ರಕ್ಕೆ ರಾಮಾನುಜನ್ ಅವರ ಕೊಡುಗೆಯನ್ನು ಯುವ ಪೀಳಿಗೆಗೆ ತಿಳಿಸುವುದು, ಮಾನವೀಯತೆಯ ಬೆಳವಣಿಗೆಗೆ ಗಣಿತದ ಮಹತ್ವ ಸಾರುವುದು ಈ ದಿನದ ಉದ್ದೇಶ.