ಪ್ರಾರ್ಥನೆ ಮಾಡುವ ವೇಳೆ ಭಾರತದಲ್ಲೂ ಯಾರನ್ನು ಕೊಂದಿಲ್ಲ: ಪಾಕ್ ಸಚಿವ

ಪ್ರಾರ್ಥನೆ ಮಾಡುವ ವೇಳೆ ಭಾರತದಲ್ಲೂ ಯಾರನ್ನು ಕೊಂದಿಲ್ಲ: ಪಾಕ್ ಸಚಿವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲೂ (India) ಪ್ರಾರ್ಥನೆ ಮಾಡುವ ವೇಳೆ ಯಾರನ್ನು ಕೊಂದಿಲ್ಲ ಎಂದು ಆದ್ರೆ ಪೇಶಾವರ್‌ನಲ್ಲಿ ಮಸೀದಿ (Peshawar Mosque) ಮೇಲೆ ಬಾಂಬ್‌ ದಾಳಿ ಆಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (Khwaja Asif) ಪ್ರತಿಕ್ರಿಯಿಸಿದ್ದಾರೆ.

ಭಾರತದಲ್ಲಾಗಲಿ ಅಥವಾ ಇಸ್ರೇಲ್‌ನಲ್ಲಾಗಿ (Israel) ಪ್ರಾರ್ಥನೆ ಮಾಡುವಾಗ ಯಾರನ್ನೂ ಹತ್ಯೆ ಮಾಡಿಲ್ಲ. ಆದರೆ ಪಾಕಿಸ್ತಾನದಲ್ಲಿ (Pakistan) ಸಂಭವಿಸಿದೆ ಎಂದು ಆಸಿಫ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಆಫ್ಘನ್ನರು ಪಾಕಿಸ್ತಾನಕ್ಕೆ ಬಂದು ನೆಲೆಸಿದ ನಂತರ ಸಾವಿರಾರು ಜನರು ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ ಎಂದು ಡಾನ್ ವರದಿ ಹೇಳಿದೆ. ಪುನರ್ವಸತಿ ಸೌಲಭ್ಯದಲ್ಲಿರುವ ಜನರ ವಿರುದ್ಧ ಸ್ವಾತ್‌ನ ಜನರು ಪ್ರತಿಭಟನೆ ನಡೆಸಿದಾಗ ಈ ಸಮಸ್ಯೆಗೆ ಪುರಾವೆ ಸಿಕ್ಕಿತು ಎಂದು ಆಸಿಫ್ ತಿಳಿಸಿದ್ದಾರೆ.

ಇದೇ ವೇಳೆ ಸಚಿವರು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದ್ದಾರೆ. ಪೇಶಾವರ್‌ನ ಮಸೀದಿಯಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ 100 ಜನರು ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ.