ಚಿನ್ನದ ಹುಡುಗಿ ಲಕ್ಷ್ಮಿ ಗೆ ಸನ್ಮಾನ
ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ 9 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಕು. ಲಕ್ಷ್ಮಿ ದೊಡ್ಡಗೌಡರ ಅವರನ್ನು ಹಾವೇರಿ ಜಿಲ್ಲೆಯ ಶಿಗ್ಗಾವ ತಾಲೂಕಿನ ಗಂಗೆಭಾವಿಯ ಯಾಲಿಗಾರ ರೆಸಾರ್ಟ್ ನಲ್ಲಿ ನಡೆಯಲಿರುವ ಗೋಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತೋಶ್ರೀ ಅನ್ನಪೂರ್ಣ ಯಲಿಗಾರ ಕುಟುಂಬ ಚಿನ್ನದ ವಿದ್ಯಾರ್ಥಿನಿಯನ್ನು ಸನ್ಮಾನಿಸಲಿದ್ದಾರೆ.ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿನಿ ಲಕ್ಷ್ಮಿ ದೊಡ್ಡಗೌಡರ ಸವಣೂರು ತಾಲೂಕಿನ ನಾಯಕನೂರು ಗ್ರಾಮದವರಾಗಿದ್ದಾರೆ. ಶೈಕ್ಷಣಿಕ ರಂಗದಲ್ಲಿ ಸಾಧನೆಗೈದ ಈ ಸಾಧಕಿ ಮೂಲತಃ ರೈತಾಪಿ ಕುಟುಂಬದಿಂದ ಬಂದವರಾಗಿದ್ಫು, ಇಂತಹ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುತ್ತಿರುವ ಶಶಿಧರ ಯಲಿಗಾರ ಕುಟುಂಬ ಮಾಡುತ್ತಿರುವ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಾಧನೆ ಗೈದ ಲಕ್ಷ್ಮಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವಂತೆ ಶುಭಕೋರುವರು.. ಆಕಾಶ ಶಶಿಧರ ಯಲಿಗಾರ,ಸೌರಭ ಶಶಿಧರ ಯಲಿಗಾರ,ಶ್ರೀಮತಿ ಆಧ್ಯಾ ಆಕಾಶ ಯಲಿಗಾರ,ಕು. ಧೈರ್ಯ ಆಕಾಶ ಯಲಿಗಾರ