ಒಂದು ಮತದ ಅಂತರದ ಗೆಲುವು; ಅದೊಂದು ರೋಚಕ ಕ್ಷಣ!
ಚುನಾವಣೆಯಲ್ಲಿ ಒಂದೊಂದು ಮತವೂ ಅಮೂಲ್ಯ ಎಂಬುದನ್ನು ತೋರಿಸಿಕೊಟ್ಟಿದ್ದು ಸಂತೆಮರಹಳ್ಳಿ ವಿಧಾನಸಭಾ ಕ್ಷೇತ್ರ. (ಈಗ ಕ್ಷೇತ್ರ ರದ್ದಾಗಿದೆ) 2004ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್. ಧ್ರುವನಾರಾಯಣ , ಜೆಡಿಎಸ್‌ನಿಂದ ಎ.ಆರ್. ಕೃಷ್ಣಮೂರ್ತಿ ಸ್ಪರ್ಧಿಸಿದ್ದರು.
ಇಬ್ಬರ ನಡುವೆ ನೆಕ್ ಟು ನೆಕ್ ಫೈಟ್ ಇರುತ್ತಿತ್ತು. ಮತ ಎಣಿಕೆ ಮುಗಿಯುವಾಗ ಬೆಳಗಿನ ಜಾವ 2 ಗಂಟೆ. ಅದೊಂದು ರೋಚಕ ಕ್ಷಣ!
ಕಾಂಗ್ರೆಸ್‌ನ ಧ್ರುವನಾರಾಯಣ 40,752 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಜೆಡಿಎಸ್‌ನ ಕೃಷ್ಣಮೂರ್ತಿ 40,751 ಮತಗಳನ್ನು ಪಡೆದಿದ್ದರು. ಎ.ಆರ್. ಕೆ. ಅವರು ಮರು ಎಣಿಕೆಗೆ ಪಟ್ಟು ಹಿಡಿದರು. ಅಂದಿನ ಜಿಲ್ಲಾ ಚುನಾವಣಾಧಿಕಾರಿ ಮರು ಎಣಿಕೆಗೆ ಒಪ್ಪಲಿಲ್ಲ. 1 ಮತದ ಅಂತರದಿಂದ ಧ್ರುವನಾರಾಯಣ ಜಯಗಳಿಸಿದ್ದಾರೆ ಎಂದು ಫಲಿತಾಂಶ ಘೋಷಿಸಿದರು.