ಕೇರಳದಲ್ಲಿ ಕೋವಿಡ್​ ಕೇಸ್​ ಹೆಚ್ಚಳ : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿದ ಸರ್ಕಾರ

ಕೇರಳದಲ್ಲಿ ಕೋವಿಡ್​ ಕೇಸ್​ ಹೆಚ್ಚಳ : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿದ ಸರ್ಕಾರ

ತಿರುವನಂತಪುರಂ : ಕೇರಳದಲ್ಲಿ ಕರೋನಾ ಕೇಸ್​ಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಲ್ಲಿ ಮತ್ತು ಕೆಲಸ ಮಾಡುವ ಜಾಗಗಳಲ್ಲಿ ಮಾಸ್ಕ್​ ಧರಿಸುವುದನ್ನು ಕಡ್ಡಾಯಗೊಳಿಸುವಂತೆ ಅಲ್ಲಿನ ಸರ್ಕಾರ ಎಲ್ಲಾ ಜಿಲ್ಲಾ ಪೊಲೀಸ್​ ಮುಖ್ಯಸ್ಥರಿಗೆ ಆದೇಶಿಸಿದೆ.

ಜೂನ್ 22 ರಂದು ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಆದೇಶ ನೀಡಲಾಗಿದ್ದು, ಪೊಲೀಸ್ ಇಲಾಖೆಯು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಏಪ್ರಿಲ್ 27 ರ ನಿರ್ದೇಶನವನ್ನು ಉಲ್ಲೇಖಿಸಿ ಸಾರ್ವಜನಿಕ ಸ್ಥಳಗಳು, ಸಭೆ ಸಮಾರಂಭಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಕೆಲಸದ ಸ್ಥಳಗಳು ಮತ್ತು ಸಾರಿಗೆ ಸಮಯದಲ್ಲಿ ಇದು ಜಾರಿಯಲ್ಲಿದೆ.

ಏಪ್ರಿಲ್ 27 ರ ಆದೇಶವು ನಿರ್ದೇಶನದ ಉಲ್ಲಂಘನೆಯು ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ ಎಂದು ಹೇಳುತ್ತದೆ.

ರಾಜ್ಯದಲ್ಲಿ ದೈನಂದಿನ ಕೋವಿಡ್ ಸೋಂಕಿನ ಸಂಖ್ಯೆ ಮತ್ತು ಸಕ್ರಿಯ ಪ್ರಕರಣಗಳಲ್ಲಿ ಕ್ರಮೇಣ ಹೆಚ್ಚಳದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಆದೇಶ ಬಂದಿದೆ.

ಕಳೆದ ವಾರದಲ್ಲಿ ರಾಜ್ಯವು ಪ್ರತಿದಿನ 3,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಸೋಮವಾರ 2,993ಕ್ಕೂ ಅಧಿಕ ಕೇಸ್​ಗಳು ದೃಢಪಟ್ಟಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.  ಜೂನ್ 27 ರವರೆಗೆ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 27,218 ನಲ್ಲಿ ದಾಖಲಾಗಿದ್ದು, ಸೋಮವಾರ ಪರೀಕ್ಷಾ ಪಾಸಿಟಿವಿಟಿ ರೇಟ್​ (ಟಿಪಿಆರ್) ಶೇಕಡಾ 18.33 ರಷ್ಟಿದೆ ಎಂದು ಅಂಕಿಅಂಶಗಳು ಸೂಚಿಸಿವೆ.