ಕೇರಳದ ವಯನಾಡಿನಲ್ಲಿ ಹುಲಿ ದಾಳಿಗೆ 52 ವರ್ಷದ ರೈತ ಬಲಿ
ಕೇರಳ : ವಯನಾಡಿನ ಪುತ್ತುಸ್ಸೆರಿ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಹುಲಿ ದಾಳಿಗೆ ಒಳಗಾದ 52 ವರ್ಷದ ರೈತರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯ ತೊಂಡರನಾಡು ಗ್ರಾಮದ ತನ್ನ ಮನೆಯ ಬಳಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಲ್ಲು ಎಂಬಾತನ ಮೇಲೆ ಹುಲಿ ದಾಳಿ ನಡೆಸಿತ್ತು.
ಕಾಲಿನಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಕಲ್ಪೆಟ್ಟಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯ ವೈದ್ಯರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು ಆ ಸಂದರ್ಭದಲ್ಲಿ ಮಾರ್ಗ ಮಧ್ಯೆ ಸಲ್ಲು ಅವರು ಹೃದಯಾಘಾತಕ್ಕೆ ಒಳಗಾದರು. ಅವರು ಗುರುವಾರ ರಾತ್ರಿ ನಿಧನರಾದರು ಎಂದು ಮಾಹಿತಿ ಲಭ್ಯವಾಗಿದೆ.
ಘಟನೆಯ ಬಗ್ಗೆ ತಿಳಿದ ನಂತರ, ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿದರು. ವಯನಾಡಿನ ಪುತ್ತುಸ್ಸೆರಿ ಹಳ್ಳಿಯ ಸುತ್ತಲೂ ಹುಲಿ ಸ್ವ ಅಡಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು, ಇದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಎದುರಾಗಿದೆ.
ಉತ್ತರ ವಯನಾಡ್ ಜಿಲ್ಲಾ ಅರಣ್ಯಾಧಿಕಾರಿ ಮಾರ್ಟಿನ್ ಲೊವೆಲ್ ಅವರ ನೇತೃತ್ವದಲ್ಲಿ ಗುರುವಾರದಿಂದ ಪ್ರಾರಂಭವಾದ ಹುಲಿಯ ಶೋಧ ಕಾರ್ಯ ಶುಕ್ರವಾರ ಬೆಳಿಗ್ಗೆ ಪುನರಾರಂಭಗೊಂಡಿದೆ. ಅರಣ್ಯ ರಕ್ಷಕರು ಬೆಳಿಗ್ಗೆಯಿಂದ ವೆಲ್ಲರಾಮುನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸುತ್ತಿದ್ದಾರೆ. ರೈತನನ್ನು ಕೊಂದ ಹುಲಿಯನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.