ಕಂಠಪೂರ್ತಿ ಕುಡಿದು ಬಿಲ್ ಬೋರ್ಡ್ಗೆ ಜೋತುಬಿದ್ದ ವ್ಯಕ್ತಿಯ ರಕ್ಷಣೆಗೆ ಜನರ ಹರಸಾಹಸ
ಸಿದ್ದಿಪೇಟ್(ತೆಲಂಗಾಣ): ತೆಲಂಗಾಣದ ಸಿದ್ದಿಪೇಟ್ನಲ್ಲಿ ವ್ಯಕ್ತಿಯೋರ್ವನ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋದಲ್ಲಿ, ವ್ಯಕ್ತಿಯು ಬಿಲ್ ಬೋರ್ಡ್ಗೆ ಜೋತುಬಿದ್ದಿದ್ದಾನೆ.
This is the Situation in #Siddipet
— Maruthi (@Maruthi0305) January 11, 2023
Mr.@trsharish Do you have an Answer?@BRSparty #KCRFailedTelangana
pic.twitter.com/u5yzfRv5FD
ವ್ಯಕ್ತಿ ಪಾನಮತ್ತನಾಗಿದ್ದು, ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ವ್ಯಕ್ತಿ ಕುಡಿದ ಮತ್ತಿನಲ್ಲಿದ್ದ. ನಿನ್ನೆ ಸಂಜೆ ಘಟನೆ ಸಂಭವಿಸಿದೆ. ಅವರು ಸಂಪೂರ್ಣವಾಗಿ ವಿಚಲಿತ ಸ್ಥಿತಿಯಲ್ಲಿದ್ದರು. ಅವನನ್ನು ಕೆಳಗಿಳಿಸಿ ಕುಟುಂಬ ಸದಸ್ಯರೊಂದಿಗೆ ಕಳುಹಿಸಲಾಗಿದೆ. ನಾವು ಅವರ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದೇವೆ. ' ಎಂದು ಸಿದ್ದಿಪೇಟೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.