ರಾಜ್ಯದಲ್ಲಿ ಮತ್ತೆ `ಥಂಡಿ' ವಾತಾವರಣ : ಮೈನಡುಗುವ ಚಳಿಗೆ ಹೊರಬಾರದ ಜನ!

ರಾಜ್ಯದಲ್ಲಿ ಮತ್ತೆ `ಥಂಡಿ' ವಾತಾವರಣ : ಮೈನಡುಗುವ ಚಳಿಗೆ ಹೊರಬಾರದ ಜನ!

ಬೆಂಗಳೂರು : ಹವಾಮಾನ ಬದಲಾವಣೆ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಾಮಾನ ಭಾರೀ ಕುಸಿತವಾಗಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚಳಿ ಹೆಚ್ಚಳವಾಗಿದೆ.

ಹೌದು, ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಟ ತಾಪಮಾನಗಳಲ್ಲಿ ಉಷ್ಣಾಂಶ ಕುಸಿತವಾಗಿದೆ.

ಬೀದರ್ ನಲ್ಲಿ 7.2, ವಿಜಯಪುರದಲ್ಲಿ 11.4 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಗದಗ ಮತ್ತು ಹಂಪಿಯಲ್ಲಿ ಗರಿಷ್ಠ ತಾಪಮಾನ ತಲಾ 2 ಡಿಗ್ರಿ ಸೆಲ್ಸಿಯಸ್, ಕನಿಷ್ಟ ತಾಪಮಾನದಲ್ಲಿ ಬೀದರ್ 9, ವಿಜಯಪುರ 5, ರಾಯಚೂರಿನಲ್ಲಿ 3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ರಾಜ್ಯದಲ್ಲಿ ಸತತ ಮಳೆ ಸುರಿದ ಪರಿಣಾಮ ವಾತಾವರಣದಲ್ಲಿ ತೇವಾಂಶ ಇರುವುದರಿಂದ ವಾಡಿಕೆಗಿಂದ ಮುನ್ನ ಚಳಿ ಶುರುವಾಗಿದ್ದು, ಇದೀಗ ಮತ್ತೆ ಹಲವು ಜಿಲ್ಲೆಗಳಲ್ಲಿ ಥಂಡಿ ವಾತಾವರಣ ಹೆಚ್ಚಾಗಿದೆ.