'ಮಾಂಸಾಹಾರ' ಸೇವಿಸಿ ದೇವಾಲಯ ಪ್ರವೇಶ ಆರೋಪಕ್ಕೆ 'ಸಿ.ಟಿ ರವಿ' ಸ್ಪಷ್ಟನೆ

'ಮಾಂಸಾಹಾರ' ಸೇವಿಸಿ ದೇವಾಲಯ ಪ್ರವೇಶ ಆರೋಪಕ್ಕೆ 'ಸಿ.ಟಿ ರವಿ' ಸ್ಪಷ್ಟನೆ

ಮಂಡ್ಯ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಂಸದ ಊಟ ಮಾಡಿ ದೇವಸ್ಥಾನ ಪ್ರವೇಶಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದೀಗ ಈ ಕುರಿತು ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, 'ನಾನು ಸಿದ್ದರಾಮಯ್ಯ ಥರ ಅಲ್ಲ, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುತ್ತೇನೆ ಅಂತ ಹೇಳುವ ದಾರ್ಷ್ಟ್ಯತೆ ನನ್ನಲ್ಲಿಲ್ಲ ಎಂದರು.

ನಾನು ಒಂದು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದವನು , ಕಾಂಗ್ರೆಸ್ ಪಕ್ಷದ ಟೂಲ್ ಕಿಟ್ ಗೆ ಬಲಿಯಾಗುವಂಥ ವ್ಯಕ್ತಿ ನಾನಲ್ಲ ಎಂದಿದ್ದಾರೆ.

ಫೆ.19ರಂದು ಸಿ.ಟಿ.ರವಿ ಉತ್ತರಕನ್ನಡ ಜಿಲ್ಲೆಗೆ ಆಗಮಿಸಿದ್ದ ವೇಳೇಯಲ್ಲಿ ವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಸಿ.ಟಿ.ರವಿ ಬಾಡೂಟ ಸೇವಿಸಿದ್ದ ಬಳಿಕ ಅವರು ಹಳೇ ಬಸ್ ನಿಲ್ದಾಣ ಸಮೀಪವಿರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದ ಬಾಗಿಲಲ್ಲೇ ಸನ್ಮಾನವನ್ನೂ ಸ್ವೀಕರಿಸಿದ್ದರು.ಈಗ ಅದು ವಿವಾದಕ್ಕೆ ಕಾರಣವಾಗಿದ್ದು, ಸಿ.ಟಿ,ರವಿ ಬಾಡೂಟ ಸೇವಿಸುತ್ತಿರುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.