ದೆಹಲಿಯ ನೂತನ ಮೇಯರ್ ಆಗಿ ಎಎಪಿಯ ಶೆಲ್ಲಿ ಒಬೆರಾಯ್ ಆಯ್ಕೆ

ವದೆಹಲಿ: ದೆಹಲಿಯ ನೂತನ ಮೇಯರ್ ಆಗಿ ಶೆಲ್ಲಿ ಒಬೆರಾಯ್ ಆಯ್ಕೆಯಾಗಿದ್ದಾರೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ ಪ್ರಕಟಿಸಿದ್ದಾರೆ. ಟ್ವೀಟ್‌ನಲ್ಲಿ ಅವರು 'ಗೂಂಡಾಗಳು' ಸೋತರು ಮತ್ತು ದೆಹಲಿಯ ಜನರು ಗೆದ್ದಿದ್ದಾರೆ ಅಂತ ಬರೆದುಕೊಂಡಿದ್ದಾರೆ.

'ಗೂಂಡಾಗಳು ಸೋತಿದ್ದಾರೆ, ಜನರು ಗೆದ್ದಿದ್ದಾರೆ. ದೆಹಲಿಯ ಮಹಾನಗರ ಪಾಲಿಕೆಗೆ ಎಎಪಿ ಮೇಯರ್ ಸಿಕ್ಕಿದ್ದಾರೆ. ದೆಹಲಿಯ ಜನರಿಗೆ ಮತ್ತು ಎಲ್ಲಾ ಆಪ್ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು' ಎಂದು ಅವರು ಟ್ವೀಟ್ ಮಾಡಿದ್ದಾರೆ. ದೆಹಲಿಯ ಎಎಪಿಯ ಮೊದಲ ಮೇಯರ್ ಶೆಲ್ಲಿ ಒಬೆರಾಯ್ ಆಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ಶೆಲ್ಲಿ ಒಬೆರಾಯ್ ಕಾಲೇಜು ಪ್ರಾಧ್ಯಾಪಕಿ. ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಅವರು ಭಾರತೀಯ ವಾಣಿಜ್ಯ ಸಂಘದ ಆಜೀವ ಸದಸ್ಯರೂ ಆಗಿದ್ದಾರೆ.