ಪುಣ್ಯ ತಿಥಿ ಅಂಗವಾಗಿ ಹೆಬ್ಬಳ್ಳಿಯಲ್ಲಿ ಉಚಿತ ಆರೋಗ್ಯ ಶಿಬಿರ

ಪುಣ್ಯ ತಿಥಿ ಅಂಗವಾಗಿ ಹೆಬ್ಬಳ್ಳಿಯಲ್ಲಿ ಉಚಿತ ಆರೋಗ್ಯ ಶಿಬಿರ

ಧಾರವಾಡ : ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಗಣ್ಯರು, ಮುತ್ಸದ್ದಿ ಸಮಾಜಸೇವಕರು, ದಿವಂಗತ ಬಾಲಪ್ಪ ಭೀಮಕ್ಕನವರ ಅವರ ಪ್ರಥಮ ವರ್ಷದ ಪುಣ್ಯ ತಿಥಿಯ ಅಂಗವಾಗಿ, ಹೆಬ್ಬಳ್ಳಿ ಸಿದ್ದಾರೂಢ ಮಠದಲ್ಲಿ, ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಿದರು.
ಪುಣ್ಯ ತಿಥಿಯ ನಿಮಿತ್ತ ಕಲ್ಪವೃಕ್ಷ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಆಶ್ರಯದಲ್ಲಿ, ಅಶೋಕ ಆಸ್ಪತ್ರೆ ವಿದ್ಯಾನಗರ ಹುಬ್ಬಳ್ಳಿ, ಮೆಡಿ‌ಲ್ಯಾಬ್ ಡೈಗ್ನೋಸ್ಟಿಕ್ ಸೆಂಟರ್ ಮತ್ತು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಯೋಗದೊಂದಿಗೆ, ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, ನೇತ್ರ ತಪಾಸಣೆ, ಎಲುಬು ಕೀಲು, ಹೃದಯ ಕಾಯಿಲೆ ಥೈರಾಯ್ಡ್ ಮುಂತಾದವುಗಳನ್ನು ತಜ್ಞ ವೈದ್ಯರಿಂದ ತಪಾಸಣೆ ಮಾಡಲಾಯಿತು, ಹೆಬ್ವಳ್ಳಿ ಗ್ರಾಮದ ನೂರಾರು ಜನರು ಈ ಶಿಬಿರದ ಲಾಭವನ್ನು ಪಡೆದುಕೊಂಡರು.

ಈ ಶಿಬಿರದಲ್ಲಿ ಗಣ್ಯರಾದ ಶಿವಲೀಲಾ ವಿನಯ ಕುಲಕರ್ಣಿ, ಗೌರಮ್ಮ ನಾಡಗೌಡರ, ದೀಪಾ ಗುತ್ತೆ, ಗ್ರಾಮ ಪಂಚಾಯತಿ ಅದ್ಯಕ್ಷೆ ತೇಜಸ್ವಿನಿ ತಮ್ಮಾಜಿರಾವ ತಲವಾಯಿ, ಉಪಾದ್ಯಕ್ಷ ವಿಠ್ಠಲ ಇಂಗಳೆ, ಸೇರಿದಂತೆ ಪಂಚಾಯ್ತಿ ಸದಸ್ಯರಗಳು ಭಾಗಿಯಾಗಿದ್ದರು.