ಪ್ರಧಾನಿ ಮೋದಿ ಆಧುನಿಕ ವಿಕಾಸ ಪುರುಷರು : ಸಿಎಂ ಬೊಮ್ಮಾಯಿ

ಬೆಂಗಳೂರು : ಪ್ರಧಾನಿ ಮೋದಿ ಆಧುನಿಕ ವಿಕಾಸ ಪುರುಷರು, ಈ ದೇಶಕ್ಕೆ ಅವರ ಕೊಡುಗೆ ಅಪಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಸರ್ಕಾರ ಅಭಿವೃದ್ದಿ ಪಥದತ್ತ ಸಾಗುತ್ತಿದೆ, ಸುವರ್ಣಯುಗದ ದರ್ಶನವನ್ನು ಕೆಂಪೇಗೌಡರು ರಾಜ್ಯದ ಜನರಿಗೆ ತೋರಿಸಿದ್ದಾರೆ ಎಂದರು.
ಇಂದು ಮೋದಿ ಹಲವು ಕಾರ್ಯಕ್ರಮಲ್ಲಿ ಭಾಗಿಯಾಗಿದ್ದಾರೆ , ದೇಶ ಆರ್ಥಿಕವಾಗಿ ಪ್ರಬಲವಾಗಿ ಮುಂದುವರೆಯಲು ಮೋದಿ ಕಾರಣ, ಮೋದಿ ಕೈಯಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ದೈವ ಇಚ್ಚೆಯೇ ಹೌದು ಎಂದು ಬೊಮ್ಮಾಯಿ ಹೇಳಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಗೆ ಕೆಂಪೇಗೌಡರ ವಿಗ್ರಹ ನೀಡಿ ಸಿಎಂ ಬೊಮ್ಮಾಯಿ ಗೌರವಿಸಿದ್ದಾರೆ.