ಹೆಡ್ ಕಾನ್‍ಸ್ಟೆಬಲ್ ಮತ್ತು ಕಾನ್‍ಸ್ಟೆಬಲ್‍ಗಳ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶವಿಲ್ಲ : ಆರಗ ಜ್ಞಾನೇಂದ್ರಹೆಡ್ ಕಾನ್‍ಸ್ಟೆಬಲ್ ಮತ್ತು ಕಾನ್‍ಸ್ಟೆಬಲ್‍ಗಳ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶವಿಲ್ಲ

ಬೆಂಗಳೂರು : ಹೆಡ್ ಕಾನ್‍ಸ್ಟೆಬಲ್ ಮತ್ತು ಕಾನ್‍ಸ್ಟೆಬಲ್‍ಗಳ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶವಿಲ್ಲ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಡಳಿತಾತ್ಮಕ ದೃಷ್ಟಿಯಿಂದ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆಯಾಗಲು ಅವಕಾಶ ಕಲ್ಪಿಸಿಲ್ಲ.
ಅವರ ಬೇಡಿಕೆ ಮತ್ತು ಸಮಸ್ಯೆ ಬಗ್ಗೆ ಸೂಕ್ತ ಸಂದರ್ಭದಲ್ಲಿ ಪರಿಹಾರ ಒದಗಿಸುವ ಬಗ್ಗೆ ಗಮನಹರಿಸಲಾಗುವುದು ಎಂದು ಹೇಳಿದರು.
ನಾನ್ ಐಪಿಎಸ್ ಹುದ್ದೆಗಳಿಗೂ ಐಪಿಎಸ್ ಅಕಾರಿಗಳ ನೇಮಕದ ವಿಚಾರದ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ ನ್ಯಾಯ ಒದಗಿಸಲಾಗುವುದು. ಈ ಸಂಬಂಧ ಹಿರಿಯ ಅಕಾರಿಗಳೊಂದಿಗೆ ಸಂವಾದ ನಡೆಸಲಾಗುವುದು. ನೇರವಾಗಿ ಐಪಿಎಸ್ ಪಡೆಯದವರು ಕೂಡ ಬಡ್ತಿ ಮೂಲಕ ಐಪಿಎಸ್ ಹುದ್ದೆ ಪಡೆಯುವ ಅವಕಾಶವಿದೆ. ನಮ್ಮ ರಾಜ್ಯದ ಅಕಾರಿಗಳಿಗೂ ಇದರಿಂದ ಅನುಕೂಲವಾಗುತ್ತದೆ ಎಂದರು.