ಮಾರುಕಟ್ಟೆಗೆ ಕಾಲಿಟ್ಟಿದೆ ನಕಲಿ ಆಲೂಗಡ್ಡೆ ನೀವು ತರುತ್ತಿರುವ ಆಲೂಗಡ್ದೆಯನ್ನೊಮ್ಮೆ ಚೆಕ್ ಮಾಡಿಕೊಳ್ಳಿ
ಬೆಂಗಳೂರು : ಮಾರುಕಟ್ಟೆಗೆ ನಕಲಿ ಆಲೂಗಡ್ಡೆ ಕಾಲಿಟ್ಟಿವೆ. ಅಸಲಿ ಆಲೂಗಡ್ಡೆಯೊಂದಿಗೆ ಇದನ್ನೂ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಆದರೆ ಈ ಆಲೂಗಡ್ಡೆಯ ರುಚಿಯೇ ಬೇರೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಲೂಗಡ್ಡೆ ಚಂದ್ರಮುಖಿ ಆಲೂಗಡ್ಡೆ.
ಮಿಶ್ರ ವಿಧದ ಆಲೂಗಡ್ಡೆ ಎನ್ನುತ್ತಾರೆ ವ್ಯವಸಾಯ ಸಹಕಾರಿ ಸಂಘದ ಸದಸ್ಯರು. ಈ ಆಲೂಗಡ್ಡೆಯನ್ನು ಪಂಜಾಬ್ ಮತ್ತು ಜಲಂಧರ್‌ನ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತದೆ.
ಆಲೂಗೆಡ್ಡೆಯ ಈ ಕೃಷಿಯಲ್ಲಿ ಇಳುವರಿ ಹೆಚ್ಚು. ಒಂದು ಇಳುವರಿಯಲ್ಲಿ ಚಂದ್ರಮುಖಿ ಆಲೂಗೆಡ್ಡೆ 50 ರಿಂದ 60 ಚೀಲ ಉತ್ಪಾದನೆಯಾಗುತ್ತಿದ್ದರೆ, ಹೇಮಾಂಗಿನಿ ಉತ್ಪಾದನೆ ಸುಮಾರು 90 ರಿಂದ 95 ಚೀಲಗಳಷ್ಟಾಗಿರುತ್ತದೆ.
ಈ ಆಲೂಗೆಡ್ಡೆಯ ಉತ್ಪಾದನೆ ಪ್ರಮಾಣ ಹೆಚ್ಚಿದ್ದರೂ, ಬೇಡಿಕೆ ತೀರಾ ಕಡಿಮೆ. ಈ ಆಲೂಗಡ್ಡೆಯನ್ನು ಸರಿಯಾಗಿ ಬೇಯಿಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಈ ಆಲೂಗಡ್ಡೆಗಳ ರುಚಿ ಕೂಡಾ ಉತ್ತಮವಾಗಿಲ್ಲ.
ಹೇಮಾಂಗಿನಿ ಆಲೂಗಡ್ಡೆ ಮತ್ತು ಚಂದ್ರಮುಖಿ ಆಲೂಗಡ್ಡೆಯನ್ನು ಹೊರಗಿನಿಂದ ಗುರುತಿಸುವುದು ತುಂಬಾ ಕಷ್ಟಕರವಾಗಿದೆ. ಚಂದ್ರಮುಖಿ ಆಲೂಗೆಡ್ಡೆಯೊಂದಿಗೆ ಕ್ರಾಸ್ ಬ್ರೀಡಿಂಗ್ ಮೂಲಕ ಹೇಮಾಂಗಿನಿ ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ.
ಈ ಆಲೂಗೆಡ್ಡೆ ಹೈಬ್ರಿಡ್ ಆಗಿರುವುದರಿಂದ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುವುದು ಸಾಧ್ಯ. ಚಂದ್ರಮುಖಿ ಆಲೂಗಡ್ಡೆ ಬೆಳೆಯಲು ಮೂರ್ನಾಲ್ಕು ತಿಂಗಳು ತೆಗೆದುಕೊಳ್ಳುತ್ತದೆ.
ಆದರೆ ಈ ಹೈಬ್ರಿಡ್ ಆಲೂಗಡ್ಡೆಗಳು ಒಂದೂವರೆ ಎರಡು ತಿಂಗಳೊಳಗೆ ಇಳುವರಿ ನೀಡುತ್ತದೆ.
ಈ ಆಲೂಗಡ್ಡೆಯನ್ನು ಎರಡು ರೀತಿಯಲ್ಲಿ ಗುರುತಿಸಬಹುದು. ಮೊದಲನೆಯದಾಗಿ, ಎರಡು ರೀತಿಯಆಲೂಗೆಡ್ಡೆ ಸಿಪ್ಪೆ ಸುಲಿದ ನಂತರ, ಒಳಗೆ ಬಣ್ಣಗಳು ವಿಭಿನ್ನವಾಗಿವೆ.
ಚದ್ರಮುಖಿ ಆಲೂಗೆಡ್ಡೆಯ ಒಳಭಾಗವು ಮಂದ ಹಳದಿ ಬಣ್ಣದ್ದಾಗಿದ್ದರೆ ಹೇಮಾಂಗಿನಿ ಆಲೂಗಡ್ಡೆಯ ಒಳಭಾಗವು ಬಿಳಿಯಾಗಿರುತ್ತದೆ. ಎರಡನೆಯದಾಗಿ, ಯಾವ ಆಲೂಗೆಡ್ಡೆ ಎನ್ನುವುದನ್ನು ರುಚಿ ನೋಡುವ ಮೂಲಕ ಅರ್ಥಮಾಡಿಕೊಳ್ಳಬಹುದು.