ಗೋಲ್ "ಮಾಲ್" : ರಾತ್ರೋ ರಾತ್ರಿ ಮಾಯವಾದ ಬಸ್ ನಿಲ್ದಾಣ

ಗೋಲ್ "ಮಾಲ್" : ರಾತ್ರೋ ರಾತ್ರಿ ಮಾಯವಾದ ಬಸ್ ನಿಲ್ದಾಣ

ಕೆಆರ್ ಪುರ, ಆ.28- ಸಾರ್ವಜನಿಕ ಬಸ್ ನಿಲ್ದಾಣ ರಾತ್ರೋ ರಾತ್ರಿ ಮಾಯವಾಗಿರುವ ಘಟನೆ ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟಿಸಿ ಪಾಳ್ಯ ಮುಖ್ಯರಸ್ತೆಯ ಆನಂದಪುರದಲ್ಲಿ ಹಲವು ವರ್ಷಗಳಿಂದ ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣವಿತ್ತು. ನಿನ್ನೆ ರಾತ್ರಿ ಕಿಡಿಗೇಡಿಗಳು ಕಬ್ಬಿಣದಿಂದ ನಿರ್ಮಿಸಿದ್ದ ಬಸ್ ನಿಲ್ದಾಣವನ್ನು ವೆಲ್ಡಿಂಗ್ ಕರ್ಟ ಮೂಲಕ ಕಟ್ ಮಾಡಿ ಕದ್ದಾಯ್ದಿದ್ದಾರೆ.

ಬಸ್ ನಿಲ್ದಾಣ ನಿರ್ಮಾಣದ ಬಳಿಕ ಇದರ ಹಿಂದೆ ಇದ್ದ ಸೈಟ್‍ನಲ್ಲಿ ಆರ್‍ಎನ್‍ಎಸ್ ಕಾಂಪ್ಲಕ್ಸ್ ನಿರ್ಮಾಣ ಮಾಡಿ ಅದರಲ್ಲಿ ಕೆಲವು ಅಂಗಡಿಗಳು ತಲೆ ಎತ್ತಿದ್ದವು. ಕಾಂಪ್ಲೆಕ್ಸ್‍ಗೆ ಬಸ್ ನಿಲ್ದಾಣ ಅಡ್ಡಲಾಗಿತ್ತು. ಇಲ್ಲಿನ ಅಂಗಡಿಗಳಿಗೆ ಬ್ಯುಸಿನೆಸ್ ಸಹ ಕಡಿಮೆ ಆಗಿತ್ತು. ಈ ಬಸ್ ನಿಲ್ದಾಣವನ್ನುಹೇಗಾದರೂ ತೆರವು ಮಾಡುವ ಉದ್ದೇಶದಿಂದ ನಿನ್ನೆ ರಾತ್ರಿ ಏಕಾಏಕಿ ಮಾಯವಾಗಿಸಿದ್ದಾರೆ ಎಂದು ಸ್ಥಳೀಯ ಲಕ್ಷ್ಮಣ್ ಆರೋಪಿಸಿದ್ದಾರೆ.

ಬಸ್ ನಿಲ್ದಾಣ ಮಾಯವಾಗಿರುವ ಕುರಿತು ಮಾಹಿತಿ ತಿಳಿದು ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಆರ್ ಪುರ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಈ ಕಾಂಪ್ಲಕ್ಸ್ ï ನಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್ ವಶಕ್ಕೆ ಪಡೆದಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ.