KPTCL ಪರೀಕ್ಷೆ ಅಕ್ರಮ ಪ್ರಕರಣ : ಮತ್ತೆ ಆರು ಮಂದಿ ಬಂಧನ

KPTCL ಪರೀಕ್ಷೆ ಅಕ್ರಮ ಪ್ರಕರಣ : ಮತ್ತೆ ಆರು ಮಂದಿ ಬಂಧನ

ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಆರು ಜನ ಆರೋಪಿಗಳನ್ನು ಪೋಲಿಸರು ಬಂದಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಬಂಧಿತರನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಗರನಾಳ ಗ್ರಾಮದ ಈರಣ್ಣ ಬಂಕಾಪೂರ(26), ಶಿವಾನಂದ ಕುಮೋಜಿ(22) ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದ ಆದಿಲ್ ಶಾ ತಾಸೇವಾಲೆ(23), ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದ ಮಹಾಂತೇಶ ಹೊಸಾಪೂರ(22), ನಾಗನೂರ ಗ್ರಾಮದ ಮಹಾಲಿಂಗ ಕುರಿ(30) ಹಾಗೂ ಸವದತ್ತಿ ತಾಲೂಕಿನ ಸುಂದರ ಬಾಳಿಕಾಯಿ(23) ಅಂತ ತಿಳಿದು ಬಂದಿದೆ.

ಇದೇ ವೇಳೆ ಆರೋಪಿಗಳಿಂದ ಬಂಧಿತರಿಂದ ಇಲೆಕ್ಟ್ರಾನಿಕ್ ಡಿವೈಸ್‌, ಮೈಕ್ರೋಚಿಪ್‌ ಮತ್ತು ಮೊಬೈಲ್‌ ಸೇರಿದಂತೆ ಇತರ ದಾಖಲೆ ಮತ್ತು ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.