ಸಿದ್ಧಾರೂಢ ಮಠದ ಕೆರೆಯಲ್ಲಿ ಮುಳುಗಿ ಯುವಕ ಸಾವು

ಸಿದ್ಧಾರೂಢ ಮಠದ ಕೆರೆಯಲ್ಲಿ ಮುಳುಗಿ ಯುವಕ ಸಾವು

ಹುಬ್ಬಳ್ಳಿ: ಶ್ರೀ ಸಿದ್ದಾರೂಢರ ಮಠದ ಕೆರೆಯಲ್ಲಿನ ಶ್ರೀ ಸಿದ್ದಾರೂಢರ ಹಾಗೂ ಶ್ರೀ ಗುರುನಾಥರೂಢರ ಮೂರ್ತಿಗೆ ಅಲಂಕಾರ ಹಾಗೂ ಪೂಜೆ ಸಲ್ಲಿಸಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಉಮೇಶಪ್ಪ ಜಾಲಿಹಾಳ (22) ಮೃತ ಯುವಕ. ಈತ ಕಳೆದ 6 ವರ್ಷಗಳಿಂದ ಮಠದ ವಿದ್ಯಾರ್ಥಿನಿಯದಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ.

ಇಂದು ಬೆಳಗ್ಗೆ ಮಠದ ಕೆರೆಯ ಮಧ್ಯದಲ್ಲಿರುವ ಸಿದ್ದಾರೂಢ ಹಾಗೂ ಗುರುನಾಥರೂಢ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಈಜಿಕೊಂಡು ಹೋಗಿದ್ದಾನೆ. ಆದರೆ ಕೆರೆಯಲ್ಲಿ ಆತನಿಗೆ ಕೈ ಸೋತು ಅಥವಾ ಆರೋಗ್ಯ ಕ್ಷಿಣಗೊಂಡ ಹಿನ್ನಲೆಯಲ್ಲಿ ಆತನು ಮುಳುಗಿದ್ದು ಮೇಲೆ ಬಂದಿರುವದಿಲ್ಲ , ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಎನ್ ಡಿ ಆರ್ ಎಫ್ ಸಿಬ್ಬಂದಿ ಕಾರ್ಯಚರಣೆ ನಡೆಸಿ ಯುವಕನ ಶವ ಹೊರ ತೆಗೆದಿದ್ದಾರೆ.

ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.