ಒಲಿಂಪಿಕ್ಸ್: ಕುಸ್ತಿಪಟು ದೀಪಕ್ ಪುನಿಯಾಗೆ ಸೆಮಿ ಫೈನಲ್ ನಲ್ಲಿ ಸೋಲು

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಕುಸ್ತಿಪಟು ದೀಪಕ್ ಪುನಿಯಾ ಫೈನಲ್ ಗೆ ಪ್ರವೇಶಿಸಲು ವಿಫಲವಾಗಿದ್ದಾರೆ. ಆದರೆ, ಗುರುವಾರ ಕಂಚಿನ ಪದಕದ ಸುತ್ತಿನಲ್ಲಿ ಸೆಣಸಾಡಲಿದ್ದಾರೆ.
ದೀಪಕ್ ಅವರು ಬುಧವಾರ ನಡೆದ ಪುರುಷರ ಕುಸ್ತಿ ಸ್ಪರ್ಧೆಯ ಫ್ರೀಸ್ಟ್ರೈಲ್ 86 ಕೆಜಿ ವಿಭಾಗದ ಸೆಮಿ ಫೈನಲ್ ನಲ್ಲಿ 2018 ರ ವಿಶ್ವ ಚಾಂಪಿಯನ್ ಅಮೆರಿಕದ ಡೇವಿಡ್ ಮೋರಿಸ್ ಟೇಲರ್ ವಿರುದ್ಧ 3 ನಿಮಿಷಗಳೊಳಗೆ 0-10 ಅಂತರದಿಂದ ಸೋತಿದ್ದಾರೆ.
ದೀಪಕ್ ಪ್ರಿ-ಕ್ವಾರ್ಟರ್ ನಲ್ಲಿ ನೈಜೀರಿಯಾದ ಎಕೆರೆಕೆಮೆ ಅಗಿಯೊಮೋರ್ ಅವರನ್ನು ತಾಂತ್ರಿಕ ಶ್ರೇಷ್ಠತೆಯಿಂದ ಸೋಲಿಸಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಚೀನಾದ ಝುಶೆನ್ ಲಿನ್ ವಿರುದ್ಧ 6-3ರಿಂದ ಜಯ ಸಾಧಿಸಿದ್ದರು.