ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಚಂದ್ರಕಾಂತ ಬೆಲ್ಲದ ಸಾರಥಿ | Dharwad |

ಕನ್ನಡದ ದೇವಸ್ಥಾನ ಎಂದೇ ಹೆಸರಾಗಿರುವ ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಮುಂದೆ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ.ಪಾಟೀಲ ಪುಟ್ಟಪ್ಪನವರ ತರುವಾಯ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ನೇತೃತ್ವದಲ್ಲಿ ಮುನ್ನಡೆಯಲಿದೆ. ಚಂದ್ರಕಾಂತ ಬೆಲ್ಲದ, ಹನುಮಾಕ್ಷಿ ಗೋಗಿ, ಸಂಜೀವ ಧುಮ್ಮಕನಾಳ ಹಾಗೂ ಬಸಯ್ಯ ಶಿರೋಳ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದರು. ಕೊನೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಚಂದ್ರಕಾಂತ ಬೆಲ್ಲದ ಆಯ್ಕೆಯಾದರು