ಎದೆ ಸೀಳಿದ ರಾಡ್- ಬೆಚ್ಚಿ ಬಿದ್ದ ವೈದ್ಯರು…
ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರೋ ಪ್ಲೈಓವರ್ ಕಾಮಗಾರಿ ವೇಳೆಯಲ್ಲಿ ಬಾರಿ ಅವಘಡ ನಡೆದಿದ್ದು ಅಂತರಾಜ್ಯ ಕಾರ್ಮಿಕನೊಬ್ಬ ಸಾವಿನ ಮನೆಯ ಬಾಗಿಲನ್ನು ಕದತಟ್ಟಿ ಬಂದ ದುರ್ಘಟನೆ ಹುಬ್ಬಳ್ಳಿಯಲ್ಲಿ ಇಂದು ಮಧ್ಯಾಹ್ನದ ವೇಳೆಯಲ್ಲಿ ನಡೆದಿದೆ.
ಹುಬ್ಬಳ್ಳಿ ಹೊಸೂರು ಸರ್ಕಲ್ ಬಳಿಯಲ್ಲಿ ನಡೆಯುತ್ತಿರುವು ಪ್ಲೈ ಓವರ್ ಕಾಮಗಾರಿಯ ವೇಳೆಯಲ್ಲಿ ಪ್ಲೈಓವರ್ ಮೇಲಿಂದ ಕಬ್ಬಿಣದ ರಾಡ್ ಯುವಕನ ಎದೆ ಸೀಳಿದ ಘಟನೆ ನಡೆದಿದೆ. ಕೊಲ್ಕತ್ತಾ ಮೂಲದ ಅಬ್ದುಲ್ ಗಾಪರ್ ಎಂಬಾತ ಇಂದು ಮಧ್ಯಾಹ್ನ ಹೊಸೂರು ಸರ್ಕಲ್ ಬಳಿ ನಡೆಯುತ್ತಿರು ಪ್ಲೈಓವರ್ ಕಾಮಗರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ, ಮೇಲಿಂದ ಕಬ್ಬಿಣದ ರಾಡ್ ಅಬ್ದುಲ್ ನ ಎದೆಯನ್ನು ಸೀಳಿದ ಪರಿಣಾಮ ಅಬ್ದುಲ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೂಡಲೇ ಅಲ್ಲೇ ಕೆಲಸ ಮಾಡುತ್ತಿದ್ದ ಸಹ ಕಾರ್ಮಿಕರು ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆಯನ್ನು ಕೊಡಿಸುತ್ತಿದ್ದಾರೆ, ಸದ್ಯ ಅಬ್ದುಲ್ ನ ಎದೆಯಲ್ಲಿ ಸಿಕ್ಕಿರುವ ರಾಡ್ ನೋಡಿ ವೈದ್ಯರೇ ನೋಡಿ ಬೆಚ್ಚಿ ಬಿದ್ದಿದ್ದು ಆತನಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ.