ಶಾಲೆ ಮುಚ್ಚುವುದಿಲ್ಲ ಎಂದ ಸಚಿವ ನಾಗೇಶ್ |Banglore|

ಎರಡು ದಿನಗಳಿಂದ ರಾಜ್ಯದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ಇಳಿಮುಖ ಆಗಿದೆ. 1ರಿಂದ 12ನೇ ತರಗತಿ ವರೆಗಿನ ಮಕ್ಕಳಿಗೆ ಕೊರೋನಾ ಕಾಣಿಸಿಕೊಂಡಿಲ್ಲ. ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.ವಿಧಾನ ಸೌಧದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಡಾ. ಸುದರ್ಶನ್ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿ ಶಾಲೆ ಕ್ಲೋಸ್ ಮಾಡುವ ಯಾವ ಪರಿಸ್ಥಿತಿ ಕೂಡ ಇಲ್ಲ. ಆದರೆ ಹಾಸ್ಟೆಲ್ ಹಾಗೂ ವಸತಿ ಶಾಲೆಗಳ ಕಡೆಗೆ ಗಮನ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಹೀಗಾಗಿ ತಕ್ಷಣ ಸರ್ಕಾರ ಜಂಟಿ ಸಮಿತಿ ರಚಿಸಿ ಎಸ್.ಓ.ಪಿ. ಅಡಿ ಕಠಿಣ ಕ್ರಮ ಜಾರಿ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವ ನಾಗೇಶ್ ಹೇಳಿದರು.ಶಾಲೆ ಮುಚ್ಚುವ ಯಾವ ನಿರ್ಧಾರವನ್ನೂ ಸರ್ಕಾರ ಮಾಡುವುದಿಲ್ಲ. ಪಿಯುಸಿ ಪರೀಕ್ಷೆ ಕೂಡ ಎಂದಿನಂತೆ ನಡೆಯಲಿದೆ. ಮಕ್ಕಳು,ಪೋಷಕರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.ಇಬ್ಬರು ಪ್ರಾಧ್ಯಾಪಕರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈ ಬಗ್ಗೆ ಸರ್ಕಾರಕ್ಕೂ ವರದಿ ಬಂದಿದೆ. 172ಸೋಂಕಿತರಲ್ಲಿ 100 ಮಕ್ಕಳು ಗುಣಮುಖರಾಗಿದ್ದಾರೆ ಎಂದು ಸಚಿವ ನಾಗೇಶ್ ಹೇಳಿದರು.ವಸತಿ ಶಾಲೆಯಲ್ಲಿ ಮಕ್ಕಳನ್ನೂ ಅಂತರ ಕಾಯ್ದುಕೊಳ್ಳಲು ಸೋಚನೆ ನೀಡಲಾಗಿದೆ. ಪೋಷಕರು ಕಡ್ಡಾಯವಾಗಿ ಎರಡನೇ ಲಸಿಕೆ ಹಾಕಿಕೊಳ್ಳಲು ಮನವಿ ಮಾಡಲಾಗಿದೆ. ಇದು ಜನರ ಪರವಾಗಿ ಸರ್ಕಾರದ ಕಳಕಳಿ ಕೂಡ. ಆದರೆ ಇದನ್ನು ಕಾನೂನು ಮಾಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಕೂಡ ಲಸಿಕೆ ಕಡ್ಡಾಯಗೊಳಿಸಲು ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಜಾಗೃತಿಮೂಡಿಸುವುದು ನಮ್ಮ ಕೆಲಸ ಎಂದು ಸಚಿವ ನಾಗೇಶ್ ಹೇಳಿದರು.