ಗಂಗಶೆಟ್ಟಿ ಕೆರೆಯ ಪಕ್ಕದಲ್ಲಿ ಇದ್ದಕ್ಕಿದ್ದಂತೆ ಲೇಔಟ್ ನಿರ್ಮಾಣ
ಕೆ.ಆರ್.ಪುರ
ಗಂಗಶೆಟ್ಟಿ ಕೆರೆಯ ಪಕ್ಕದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಬಡವಾಣೆ ನಿರ್ಮಾಣ ಮಾಡಲಾಗುತ್ತಿದೆ ಎಂದು ರತ್ನ ಭಾರತ ರೈತ ಸಮಾಜದ ಅಧ್ಯಕ್ಷ ಎಲ್ ಲಕ್ಷ್ಮಣ್ ದೂರಿದರು. ಇಲ್ಲಿನ ತಮ್ಮ ಕಚೇರಿಯಲ್ಲಿ ಪ್ರತಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ದೇವಸಂದ್ರ ವಾರ್ಡಿನ ಗಂಗಶೆಟ್ಟಿ ಕೆರೆ ಜಾಗದಲ್ಲಿ ಇದ್ದಕ್ಕಿದ್ದಂತೆ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ. ಲೇಔಟ್ ನಿರ್ಮಾಣ ಅನುಮತಿ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದರು. ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳು ಲೇಔಟ್ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕೆರೆ ಜಾಗವನ್ನು ಉಳಿಸಿಕೊಡಬೇಕು ಇಲ್ಲದಿದ್ದರೆ ಕೆರೆ ಉಳಿವಿಗಾಗಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂಧರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ನಾಗರಾಜ್, ಕೋಲಾರ ಜಿಲ್ಲಾಧ್ಯಕ್ಷ ನಂದೀಶ್ ಗೌಡ, ಸತೀಶ್, ಮಾರುತಿ, ಮಹೇಶ್, ಚೇತನ್ ಇದ್ದರು.