ಫಿಫಾ ವರ್ಲ್ಡ್ ಕಪ್: ಘಾನಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಪೋರ್ಚುಗಲ್
ದೋಹಾ: ಫಿಫಾ ವಿಶ್ವಕಪ್ ನ ಗುರುವಾರದ ಪಂದ್ಯದಲ್ಲಿ ಘಾನಾ ಎದುರು ಜಯಗಳಿಸುವ ಮೂಲಕ ಪೋರ್ಚುಗಲ್ ಶುಭಾರಂಭ ಮಾಡಿದೆ. ಘಾನಾ ವಿರುದ್ಧ 3-2 ಗೋಲ್ ಗಳಿಂದ ಪೋರ್ಚುಗಲ್ ಜಯ ಸಾಧಿಸಿತು. ಪೋರ್ಚುಗಲ್ ಪರ ಕ್ರಿಸ್ಟಿಯಾನೊ ರೊನಾಲ್ಡೊ, ಜೊವಾವೊ ಫೆಲಿಕ್ಸ್ ಮತ್ತು ರಾಫೆಲ್ ಲಿಯಾವೊ ತಲಾ ಒಂದು ಗೋಲ್ ಹೊಡೆದರು. ಉತ್ತಮ ಪೈಪೋಟಿ ನೀಡಿದ ಘಾನಾ ಪರವಾಗಿ ಆಂಡ್ರೆ ಆಯೆವ್ ಮತ್ತು ಉಸ್ಮಾನ್ ಬುಕಾರಿ ತಲಾ 1 ಗೋಲ್ ಭಾರಿಸಿದರು. ಪಂದ್ಯದ ಮೊದಲಾರ್ಧ ಗೋಲ್ ರಹಿತವಾಗಿತ್ತು.