ಜಿಲ್ಲಾ ಕಸಾಪ ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್, ವಾದ ಮಂಡಿಸಿದ ವಕೀಲ ಪಾಟೀಲ

ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಪ್ರಕ್ರಿಯೆಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕುರಿತು ಧಾರವಾಡ ಜಿಲ್ಲೆಯ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಗೂ ಪತ್ರಕರ್ತ ನಾಗರಾಜ ಕಿರಣಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕಕ್ಷಿದಾರರ ಪರ ಹಿರಿಯ ವಕೀಲರಾದ ಎ.ಆರ್.ಪಾಟೀಲ ವಾದ ಮಂಡಿಸಿದ್ದಾರೆ. ಎಸ್.ಎಚ್.ಪಾಟೀಲ ಎನ್ನುವವರು ಈ ಹಿಂದೆ ಡಾ.ಲಿಂಗರಾಜ ಅಂಗಡಿ ಅವರ ನಾಮಪತ್ರ ತಿರಸ್ಕರಿಸುವಂತೆ ಹಲವು ಬಾರಿ ಕೇಂದ್ರ ಚುನಾವಣಾಧಿಕಾರಿ ಹಾಗೂ ಧಾರವಾಡ ಜಿಲ್ಲೆಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದರು. ಆದರೆ, ಅದನ್ನು ಚುನಾವಣಾಧಿಕಾರಿಗಳು ಪುರಸ್ಕರಿಸಿರಲಿಲ್ಲ ಎಂದು ನ್ಯಾಯವಾದಿ ಎ.ಆರ್. ಪಾಟೀಲ ಹೇಳಿದ್ರು. ಹೀಗಾಗಿ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಜೊತೆಗೆ ಡಾ.ಲಿಂಗರಾಜ ಅಂಗಡಿ ಅವರು ಕಸಾಪ ನಿಯಮಾವಳಿ ಗಾಳಿಗೆ ತೂರಿ ಎರಡು ಬಾರಿ ಅಧ್ಯಕ್ಷರಾಗಿದ್ದಲ್ಲದೇ, ಮೂರನೇ ಅವಧಿಗೆ ಸ್ಪರ್ಧಿಸಿದ್ದರು. ಇದು ಕಸಾಪ ನಿಯಮಾವಳಿ ಸ್ಪಷ್ಟವಾಗಿ ಉಲ್ಲಂಘನೆ ಅಲ್ಲದೆ, ಕಸಾಪ ನಿಯಮಾವಳಿ ಪ್ರಕಾರ ಉಪವಿಭಾಗಾಧಿಕಾರಿ ಅಥವಾ ಅದಕ್ಕಿಂತ ಮೇಲಿನ ಅಧಿಕಾರಿಗಳನ್ನು ನೇಮಿಸಬೇಕು ಎಂಬ ನಿಯಮವಿದೆ. ಆದರೆ ಕಸಾಪ ಧಾರವಾಡ ಜಿಲ್ಲೆಯ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಅವರನ್ನು ನೇಮಿಸಿದೆ. ಇದು ಕೂಡ ಸರಿಯಲ್ಲ ಎಂದು ಹೈಕೋರ್ಟ್ ಗಮನ ಸೆಳೆದಿದ್ದಾರೆ. ಕಕ್ಷಿದಾರರ ವಾದ ಪುರಸ್ಕರಿಸಿದ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ ಅವರಿದ್ದ ಏಕಸದಸ್ಯ ಪೀಠ ಚುನಾವಣಾ ಪ್ರಕ್ರಿಯೆಗೆತಡೆಯಾಜ್ಞೆ ನೀಡಿ ಮಹತ್ವದ ಆದೇಶ ಹೊರಡಿಸಿದೆ ಇದು ನಮ್ಮಗೆ ಸಂತೋಷ ಆಗಿದೆ ಎಂದು ಶಿವನಗೌಡ ಪಾಟೀಲ ಹೇಳಿದ್ರು..