ನಂದಿನಿ ಹಾಲಿನ ಬೆಲೆ ಹೆಚ್ಚಳ; ಇಂದಿನಿಂದಲೇ ಜಾರಿ
KMF ನಂದಿನಿ ಹಾಲಿನ ಬೆಲೆ ಹೆಚ್ಚಳ ಮಾಡಿದೆ. ಪ್ರತಿ ಲೀಟರ್ ಹಾಲಿನ ಬೆಲೆ 2 ರೂ ಏರಿಕೆ ಮಾಡಲಾಗಿದೆ ಎಂದು KMF ಬಾಲಚಂದ್ರ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ಮೊಸರು ಒಂದು ಲೀಟರ್ ಗೆ 45-47 ರೂ.ಗೆ ಏರಿಕೆಯಾಗಿದೆ. ನಂದಿನಿ & ಮೊಸರಿನ ಪರಿಸ್ಕೃತ ದರ ಇಂದಿನಿಂದಲೇ (ನ.24) ಜಾರಿಗೆ ಬರಲಿದೆ. ಟೋನ್ಡ್ ಹಾಲು ಲೀ.ಗೆ 37-39 ರೂ., ನಂದಿನಿ ಸ್ಪೆಷಲ್ ಹಾಲು 43-45 ರೂ.ಗೆ ಏರಿಕೆ. ಮೊಸರು ಒಂದು ಲೀ.ಗೆ 45-47 ರೂ.ಗೆ ಏರಿಕೆಯಾಗಿದೆ.