ದೆಹಲಿ ಮದ್ಯ ನೀತಿ ಪ್ರಕರಣ : 12 ಆರೋಪಿಗಳ ವಿರುದ್ಧ ಇಡಿ ಎರಡನೇ ಜಾರ್ಜ್ ಶೀಟ್ ಸಲ್ಲಿಕೆ

ದೆಹಲಿ ಮದ್ಯ ನೀತಿ ಪ್ರಕರಣ : 12 ಆರೋಪಿಗಳ ವಿರುದ್ಧ ಇಡಿ ಎರಡನೇ ಜಾರ್ಜ್ ಶೀಟ್ ಸಲ್ಲಿಕೆ

ವದೆಹಲಿ : ದೆಹಲಿ ಮದ್ಯ ಅಬಕಾರಿ ನೀತಿ ಪ್ರಕರಣ (liquor excise policy case) ಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಎರಡನೇ ಆರೋಪಪಟ್ಟಿ(chargesheet ) ಸಲ್ಲಿಸಿದೆ. ಕೇಂದ್ರ ತನಿಖಾ ಸಂಸ್ಥೆ ಒಟ್ಟು 12 ಆರೋಪಿಗಳನ್ನು ಹೆಸರಿಸಿದ್ದು, ಈ ಪೈಕಿ ಐವರನ್ನು ಈ ಹಿಂದೆಯೇ ಬಂಧಿಸಿದೆ.

ಇಡಿ ಚಾರ್ಜ್ ಶೀಟ್‌ನಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಏಳು ಕಂಪನಿಗಳನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.

ಐವರು ಆರೋಪಿಗಳಾದ ವಿಜಯ್ ನಾಯರ್, ಶರತ್ ರೆಡ್ಡಿ, ಬಿನೋಯ್ ಬಾಬು, ಅಭಿಷೇಕ್ ಬೋನಪಲ್ಲಿ ಮತ್ತು ಅಮಿತ್ ಅರೋರಾ ಅವರನ್ನು ಅಧಿಕಾರಿಗಳು ಈ ಹಿಂದೆ ಕಸ್ಟಡಿಗೆ ತೆಗೆದುಕೊಂಡಿದ್ದರು.

ಇಡಿ ತನ್ನ ಆರಂಭಿಕ ಆರೋಪಪಟ್ಟಿಯಲ್ಲಿ ಮದ್ಯದ ವ್ಯಾಪಾರಿ ಸಮೀರ್ ಮಹೇಂದ್ರು, ಇಂಡೋಸ್ಪಿರಿಟ್ಸ್ ಮಾಲೀಕ ಎಂದು ಹೆಸರಿಸಿತ್ತು. ಇವರು ಕೂಡ ಮದ್ಯದ ವ್ಯಾಪಾರಿಯಾಗಿದ್ದು, ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಎಫ್‌ಐಆರ್‌ನ ಪ್ರಕಾರ, ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳಲ್ಲಿ ಭಾಗಿಯಾಗಿರುವ ಮದ್ಯದ ವ್ಯಾಪಾರಿಗಳಲ್ಲಿ ಒಬ್ಬರಾದ ಇಂಡೋಸ್ಪಿರಿಟ್‌ನ ಮಾಲೀಕ ಸಮೀರ್ ಮಹೇಂದ್ರು ಅವರು ಸಿಸೋಡಿಯಾ ಅವರ ಆಪ್ತ ಸಹಚರರಿಗೆ ಕೋಟಿಗಳಲ್ಲಿ ಕನಿಷ್ಠ ಎರಡು ಪಾವತಿಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆಪಾದಿತ ಮದ್ಯ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಕೂಡ ತನ್ನ ಚಾರ್ಜ್‌ಶೀಟ್‌ನಲ್ಲಿ ಉಪ ಮುಖ್ಯಮಂತ್ರಿಯನ್ನು ಉಲ್ಲೇಖಿಸಿಲ್ಲ. ಆದರೆ ಸಿಸೋಡಿಯಾ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಸಮರ್ಥಿಸಿಕೊಂಡಿದೆ.

ಆಪಾದಿತ ಮದ್ಯ ನೀತಿ ಹಗರಣದಲ್ಲಿ ಬಂಧಿತರಾಗಿರುವ ಎಲ್ಲಾ ಜನರನ್ನು ಜನವರಿ 7 ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.