'ಹಾರ್ಟ್ ಅಟ್ಯಾಕ್' ಅಂದ್ರೇ.? ಹೇಗೆ ಸಂಭವಿಸುತ್ತದೆ.? ಚಿಕಿತ್ಸೆ ಹೇಗೆ.? ಈ ಬಗ್ಗೆ ವೈದ್ಯರೇ ನೀಡಿದ ಈ ಮಾಹಿತಿ ಓದಿ.!

'ಹಾರ್ಟ್ ಅಟ್ಯಾಕ್' ಅಂದ್ರೇ.? ಹೇಗೆ ಸಂಭವಿಸುತ್ತದೆ.? ಚಿಕಿತ್ಸೆ ಹೇಗೆ.? ಈ ಬಗ್ಗೆ ವೈದ್ಯರೇ ನೀಡಿದ ಈ ಮಾಹಿತಿ ಓದಿ.!

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾದ ನಂತ್ರ, ಅನೇಕರು ಹೃದಯಾಘಾತದ ಬಗ್ಗೆ ಮಾಹಿತಿಯನ್ನು, ತಡೆಗಟ್ಟುವ ವಿಧಾನಗಳ ಕುರಿತಂತೆ ಮಾತನಾಡುತ್ತಿದ್ದಾರೆ. ಆ ಬಗ್ಗೆ ಸಿಗೋ ಮಾಹಿತಿಯನ್ನು ಹುಡುಕಿ, ಓದ್ತಾ ಇದ್ದಾರೆ. ಗೊತ್ತಿರುವವರಿಂದ ತಿಳಿದುಕೊಳ್ಳುತ್ತಿದ್ದಾರೆ.

ಅಲ್ಲದೇ ಹೃದಯ ಸಂಬಂಧಿ ಸಮಸ್ಯೆಗಳಿಗೆ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆಗೆ ಒಳಪಡೋರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಸಂದರ್ಭದಲ್ಲಿಯೇ ಹೈದರಾಬಾದ್ ನ ಕಿಮ್ಸ್ ಆಸ್ಪತ್ರೆಯಲ್ಲಿ ಹಿರಿಯ ಕಾರ್ಡಿಕ್ ಸರ್ಜನ್ ಆಗಿರುವಂತ ಡಾ.ನಿಸರ್ಗ ಅವರು, ಹೃದಯಾಘಾತದ ಪ್ರತಿಯೊಂದು ವಿಚಾರಗಳನ್ನು ಓದುಗರಿಗಾಗಿ ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದ್ರೇ.. ಹೃದಯಾಘಾತ ಅಂದ್ರೇನು.? ಹೇಗೆ ಸಂಭವಿಸುತ್ತೆ ಎನ್ನುವ ಮಾಹಿತಿ, ಮುಂದೆ ಓದಿ..

ಇಷ್ಟು ವರ್ಷ ಈ ಮೆಡಿಕಲ್ ಫೀಲ್ಡ್ ನಲ್ಲಿ ಕೆಲಸ ಮಾಡಿದ ಮೇಲೆ ಅನ್ನಿಸಿದ್ದು ಯಾವ ಸಾವನ್ನೂ ನಾವು ನಿಲ್ಲಿಸಲಾಗಲ್ಲ, ಹಾಗಿದ್ದರೂ ಪ್ರಯತ್ನದ ಮುಂದೆ ಯಾವುದೂ ಅಲ್ಲ. ನಾವು ವೈದ್ಯರುಗಳು ರೋಗಿಯ ಕೊನೆ ಉಸುರಿರುವವರೆಗೂ ಪ್ರಾಣ ಉಳಿಸಲು ಹೋರಾಟದ ಕಂಕಣ ಕಟ್ಟಿರುತ್ತೇವೆ. ಆದರೂ ಕೆಲವು ಸಾವುಗಳು ಸಂಭವಿಸಿದಾಗ ಹೀಗೆ ಮಾಡಿದ್ದರೆ/ಹಾಗೆ ಮಾಡಿದ್ದರೆ ತಪ್ಪಿಸಬಹುದಾಗಿತ್ತೇನೋ ಅನ್ನಿಸುವುದುಂಟು. ಅದರಲ್ಲೂ ಇನ್ನೂ ವಯಸ್ಸು ಸಣ್ಣದಾಗಿ, ತುಂಬಾ ಬಾಳಿ ಬದುಕ ಬೇಕಾಗಿರುವವರು ನಮ್ಮ ಕಣ್ಣ ಮುಂದೇನೇ ಕಳೆದುಕೊಂಡಾಗ ಮನಸ್ಸು ಮುದುಡುತ್ತದೆ. ವೈದ್ಯ ವೃತ್ತಿಯಲ್ಲಿದ್ದೂ, ಎಷ್ಟೋ ಸಾವುಗಳನ್ನ ನೋಡಿ ಕೂಡ, ಕೆಲವು ಸಾವುಗಳು ತುಂಬಾ ದಿನಗಳ ಕಾಲ ಕಾಡುವುದಿದೆ. ಮತ್ತೆ ಮರೆತು ಮುಂದೆ ಸಾಗುವ ಅನಿವಾರ್ಯತೆ.

Genetics ಹೃದಯ ಖಾಯಿಲೆಗೆ ತುಂಬಾ influence ಮಾಡುತ್ತೆ. ತಂದೆ ತಾಯಿಯರಲ್ಲಿ ಈ ಖಾಯಿಲೆ ಇದ್ದು, ಇಬ್ಬರಿಗೂ ಇದ್ದು, ಅದೂ ತೀವ್ರವಾಗಿ ಇದ್ದು, ಅವರಿಗೂ ಚಿಕ್ಕ ವಯಸ್ಸಿನಲ್ಲಿ ಬಂದಿದ್ದರೆ, ಸಹೋದರರಿಗೆ ತೊಂದರೆಯಿದ್ದರೆ, ಮಕ್ಕಳಿಗೆ 'ಬೇಗ' ಬಳುವಳಿಯಾಗಿ ಬರುವುದರಲ್ಲಿ ಯಾವ ಸಂಶಯವೂ ಇಲ್ಲ.(ನಾನು ಇತ್ತೀಚೆಗೆ ಒಬ್ಬರ ಹೃದಯ bypass ಶಸ್ತ್ರ ಚಿಕಿತ್ಸೆ ಮಾಡಿದೆ. ಅವರು ಮೂರನೆಯವರು. ಅವರ ಇನ್ನಿಬ್ಬರು ಸಹೋದರರಿಗೆ ಮುಂಚೆ ಇದೇ operation ಮಾಡಿದ್ದೆ. ಮೂವರೂ ದೃಢ ಕಾಯದವರು, ಇಬ್ಬರು ರಣಜಿ ಟೀಮ್ ನಲ್ಲಿ ಇದ್ದು ಕ್ರಿಕೆಟ್ ಆಡಿದವರು).

ಎದೆ ನೋವು, ತುಂಬಾ ಬೆವರುವುದು, ಅತಿಯಾಗಿ ಸೋಲು ಬರುವುದು, ಉಬ್ಬಸ, ಇವೆಲ್ಲ ಖಂಡಿತಾ ಹೃದಯದ ತೊಂದರೆಯಿಂದ ಆಗುವ ಲಕ್ಷಣಗಳು. ಎಷ್ಟೇ ವಯಸ್ಸಾಗಿರಲಿ, ಈ ಮೇಲಿನ ತೊಂದರೆಗಳನ್ನ ಎಂದೂ ಕಡೆಗಣಿಸಬಾರದು. (ವೈದ್ಯರೂ ಕೂಡ).

ಹಾರ್ಟ್ ಅಟ್ಯಾಕ್ ಅಂದರೆ, ಹೃದಯಕ್ಕೇ ರಕ್ತ ಸಂಚಾರ ಮಾಡುವ coronary artery (ಸುಮಾರು 2 mm ಅಷ್ಟೇ ಗಾತ್ರದ ಚಿಕ್ಕ ರಕ್ತನಾಳಗಳು) ಮೊದಲೇ ಬ್ಲಾಕ್ ಇದ್ದು, ಅದರ ಮೇಲೆ ರಕ್ತ ಹೆಪ್ಪುಗಟ್ಟುವುದು. ಆ ರಕ್ತ ಹೆಪ್ಪುಗಟ್ಟುವಿಕೆ ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಬಹುದು. ಹೆಚ್ಚಿನವರಿಗೆ ಒಂದಲ್ಲ ಒಂದು ಸೂಚನೆಯನ್ನ ಕೊಡುತ್ತದೆ. ಎದೆ ನೋವು ಇರುವ ಸಂದರ್ಭದಲ್ಲಾದರೆ ECG ವ್ಯತ್ಯಯವಾಗುತ್ತದೆ. ECG ಓದುವುದು ಅಷ್ಟು ಸುಲಭವಲ್ಲ. ಇಬ್ಬರು ಕಾರ್ಡಿಯೋಲಾಜಿಸ್ಟ್ ಗಳಲ್ಲೇ ಭಿನ್ನಾಭಿಪ್ರಾಯ ಬರುವಷ್ಟು ಕೆಲವೊಮ್ಮೆ ಕ್ಲಿಷ್ಟ. ECG ನಾರ್ಮಲ್ ಇದೆ ಅಂದರೂ ಕೂಡ, 2D Echocardiogram ಮತ್ತು ರಕ್ತ ಪರೀಕ್ಷೆ ಮಾಡಲೇ ಬೇಕು. ರಕ್ತ ಪರೀಕ್ಷೆಯಲ್ಲಿ ಕಾರ್ಡಿಯಾಕ್ enzyme ಗಳು ಅನಿವಾರ್ಯವಾಗಿ ಹಾರ್ಟ್ ಅಟ್ಯಾಕ್ ನಲ್ಲಿ ಜಾಸ್ತಿ ಆಗಿರುತ್ತೆ.

ಟ್ರೋಪೋನಿನ್ ಅನ್ನುವ ಈ ರಾಸಾಯನಿಕ ಪದಾರ್ಥ, ಹೃದಯದ ಸ್ನಾಯುಗಳು ಸಾಯುತ್ತಿರುವುದನ್ನ ಬಹುಬೇಗ ತೋರಿಸುತ್ತದೆ. ಕೆಲವೊಮ್ಮೆ ಕಾರ್ಡಿಯಾಕ್ enzyme ಮಾಡದೇ ಹಾರ್ಟ್ ಅಟ್ಯಾಕ್ miss ಆಗಿರುವುದೂ ಇದೆ. ECG ಚೆನ್ನಾಗಿಲ್ಲ ಅಂದರೆ ಖಂಡಿತಾ ಮಾಡಲೇಬೇಕು. ರೋಗಿಯನ್ನ ಯಾವ ಕಾರಣಕ್ಕೂ ಹೆಚ್ಚು move ಮಾಡಬಾರದು. ಸ್ವಲ್ಪವೂ strain ಆಗಬಾರದು. ಯಾಕೆಂದರೆ ಹಾಗಾದಾಗ ಹೃದಯ ಮತ್ತೂ ಹೆಚ್ಚು ಕೆಲಸ ಮಾಡಬೇಕು, ಆಗ ಸೋಲುತ್ತದೆ.

ಒಳ್ಳೆಯ gym ಮಾಡುತ್ತಿದ್ದೆ, ನಾನಿನ್ನೂ ಬಹಳ ಸಣ್ಣ ವಯಸ್ಸಿನವ ಅನ್ನುವ ಕಲ್ಪನೆಯಿಂದ ಯಾವತ್ತೂ ನೆಗ್ಲೆಕ್ಟ್ ಮಾಡಲೇ ಬಾರದು.

Gym is not equivalent to TMT . TMT positive ಇರುವವರೂ ಕೂಡ TMT ಮಾಡುವಾಗ ಚೆನ್ನಾಗಿಯೇ ಓಡಿರುತ್ತಾರೆ, ಅವರಿಗೇನೂ ಎದೆ ನೋವು ಬಂದಿರಬೇಕೆಂದಿಲ್ಲ. Blockage ಇರುವವರು gym ನಲ್ಲಿ/ TMT ಯಲ್ಲಿ ಎದೆನೋವು, ಉಬ್ಬಸ ಕಾಣಿಸಿಕೊಳ್ಳಲೇ ಬೇಕೆಂಬ ನಿಯಮವಿಲ್ಲ. ಒಳ್ಳೆಯ ಒಂದು ಘಂಟೆ ಜಿಮ್ ಮಾಡುವವರೂ ಹತ್ತು ನಿಮಿಷ TMT ಮಾಡಿದಾಗ ಪಾಸಿಟಿವ್ ಬಂದಿರುವುದಿದೆ. ಹಾಗಿದ್ದಾಗ ಅವರಿಗೆ ಆದಷ್ಟು ಬೇಗ coronary angiogram ಮಾಡಬೇಕು.

ಇನ್ನು ಹಾರ್ಟ್ ಅಟ್ಯಾಕ್ ವಿಚಾರಕ್ಕೆ ಬರುವುದಾದರೆ, ಆ golden hour ನಲ್ಲಿ ಯಾರು ಎಷ್ಟು ಜಾಣ್ಮೆ ವಹಿಸಿ, ಹೃದಯದ ಸಾವನ್ನ ಕಡಿಮೆ ಮಾಡುತ್ತಾರೋ ಅವರೇ ಗೆದ್ದ ಹಾಗೆ. ನಮ್ಮ ದೇಶದಲ್ಲಿ Public defibrillator ಗಳ ಕೊರತೆ ಇರುವುದರಿಂದ, ಎಷ್ಟೋ ರೋಗಿಗಳು ಆಸ್ಪತ್ರೆ ತಲುಪುವುದೇ ಇಲ್ಲ. ಹಾರ್ಟ್ ಅಟ್ಯಾಕ್ ಆದಾಗ heart can fibrillate . ಅದು ಒಂದು pre death event . ಹೃದಯ ತನ್ನ ಪಂಪಿಂಗ್ ಮಾಡುವುದನ್ನ ನಿಲ್ಲಿಸಿ, ತರತರನೇ ನಡುಗುತ್ತಾ ಕೂರುವುದೇ fibrillation . ಆಗ ಮೆದುಳಿಗೆ/ ಬೇರೆ ಯಾವುದೇ organ ಗೆ ರಕ್ತ ಸಂಚಾರ ಇರುವುದಿಲ್ಲ. Fibrillation ಗೆ ಉತ್ತರ Defibrillation shock ಮಾತ್ರ. ಎದೆ ಒತ್ತಿ CPR ಮಾಡಿದರೂ ಉಪಯೋಗ ಆಗುವುದಿಲ್ಲ.

Cardiac arrest ನಲ್ಲಿ ಮಾತ್ರ CPR ಖಂಡಿತಾ ಜೀವ ಉಳಿಸಬಲ್ಲದು. ಒಬ್ಬ ವ್ಯಕ್ತಿ ಹಾಗೆ ಕುಸಿದಾಗ, Fibrillation ಆಗುತ್ತಿದೆ ಅಂತ ಗೊತ್ತಾಗುವುದು ECG ಯಿಂದ ಮಾತ್ರ. ಆಂಬುಲೆನ್ಸ್ ನಲ್ಲಿ ECG monitor ಇರುತ್ತದೆ. Shock ಇರುತ್ತದೆ, ಜೀವವನ್ನ ಕೊನೇಪಕ್ಷ ಆಸ್ಪತ್ರೆ ವರೆಗೆ ಹಿಡಿದಿಡಬಹುದು. ಒಬ್ಬ technician ಕೂಡ ಇದನ್ನ ಮಾಡಬಲ್ಲ. ವೈದ್ಯರಾದವರು ಖಂಡಿತಾ ಯಾವುದೇ cardiac emergency ಯಲ್ಲಿ ambulance ನ್ನೇ prefer ಮಾಡುವುದು. There is something called VIP syndrome in medical field . ರೋಗಿ VIP ಆಗಿದ್ದರೆ ವೈದ್ಯರ ಚಿತ್ತ ಸರಿಯಾಗಿ ಕೆಲಸ ಮಾಡದೇ ಚಿಕಿತ್ಸೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇರಬಹುದೆಂದು ಆ ಸಿಂಡ್ರೋಮ್ ಹೇಳುತ್ತದೆ!

ರೋಗಿ ಆಸ್ಪತ್ರೆಗೆ ಬಂದ ಮೇಲೆ ಬದುಕಿಯೇ ಬದುಕುತ್ತಾನೆಂದಲ್ಲ, at least Emergency Angiogram ಮಾಡಿ ರಕ್ತ ಸಂಚಾರಕ್ಕೆ ಮತ್ತೆ ಸುವ್ಯವಸ್ಥೆ ಮಾಡಬಹುದು. ECMO ದಂತಾ modern machine ಗಳು ಕಾರ್ಡಿಯಾಕ್ ಅರೆಸ್ಟ್ ಆಗಿರುವವರನ್ನೂ ಹೊರಕ್ಕೆ ತಂದಿವೆ.

ಕೊನೆಗೂ ಇವೆಲ್ಲ postmortem ಗಳು.

ಮನೆಯಲ್ಲಿ ಚೆನ್ನಾಗಿದ್ದು, ಆಸ್ಪತ್ರೆ ಹತ್ತಿರವಿದ್ದು, ದಾರಿ ಮಧ್ಯದಲ್ಲಿ ಯಾರಿಗೂ ಹೀಗಾಗಬಾರದು. ಎಚ್ಚರವಿರಲೆಂದು ಈ ಬರಹ. ಬದುಕಿದ್ದರೆ, ಇನ್ನೂ ನೂರು ಕಾಲ ಬಾಳಬಹುದಿತ್ತಲ್ಲ ಅನ್ನೋ ಕೊರಗಷ್ಟೇ.

ಡಾ.ನಿಸರ್ಗ, ಹಿರಿಯ ಕಾರ್ಡಿಕ್ ಸರ್ಜನ್, ಕಿಮ್ಸ್ ಆಸ್ಪತ್ರೆ, ಹೈದ್ರಾಬಾದ್