ಬೆಂಗಳೂರಲ್ಲಿ ಜ.31ರ ವರೆಗೂ 144 ಸೆಕ್ಷನ್ ಜಾರಿ

ಬೆಂಗಳೂರಲ್ಲಿ ಜ.31ರ ವರೆಗೂ 144 ಸೆಕ್ಷನ್ ಜಾರಿ

ಬೆಂಗಳೂರು: ಕೋವಿಡ್​​ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ರಾಜಧಾನಿಯಲ್ಲಿ ಜ.19ರ ವರೆಗೂ ಜಾರಿಯಲ್ಲಿದ್ದ 144 ಸೆಕ್ಷನ್ ಇದೀಗ ಜ.31ರ ವರೆಗೂ ವಿಸ್ತರಣೆ ಆಗಿದೆ.

ನಗರದಲ್ಲಿ ಜನಸಂಚಾರ ದಟ್ಟಣೆ ತಡೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಪ್ರತಿಭಟನೆ, ರ‍್ಯಾಲಿ, ಜನರು ಗುಂಪು ಸೇರುಕೆಯನ್ನು ನಿಷೇಧಿಸಲಾಗಿದೆ. ಜ.6ರಿಂದ 19ರ ವರೆಗೂ ಜಾರಿಯಲ್ಲಿದ್ದ 144 ಸೆಕ್ಷನ್​ ಅನ್ನು ತಿಂಗಳಾಂತ್ಯದ ವರೆಗೂ ವಿಸ್ತರಣೆ ಮಾಡಿ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಆದೇಶಿಸಿದ್ದಾರೆ. ರಾತ್ರಿ ಮಾತ್ರವಲ್ಲ, ಹಗಲಿನಲ್ಲೂ ನಗರದಲ್ಲಿ 144 ಸೆಕ್ಷನ್ ಜಾರಿಯಾಗಿದೆ. ಯಾವುದೇ ರ್ಯಾಲಿ, ಪ್ರತಿಭಟನೆ, ಸಭೆ- ಸಮಾರಂಭಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.