BBMP ನಗರ ಯೋಜನೆ ಜಂಟಿ ನಿರ್ದೇಶಕರ ವಾಪಸ್‍ಗೆ N.R.ರಮೇಶ್ ಆಗ್ರಹ

BBMP ನಗರ ಯೋಜನೆ ಜಂಟಿ ನಿರ್ದೇಶಕರ ವಾಪಸ್‍ಗೆ N.R.ರಮೇಶ್ ಆಗ್ರಹ

ಬೆಂಗಳೂರು,ನ.19- ನಿಯಮಬಾಹಿರವಾಗಿ ನಗರ ಯೋಜನೆ ಉತ್ತರ ವಿಭಾಗದ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮಂಜೇಶ್ ಅವರನ್ನು ಕೂಡಲೆ ಮಾತೃ ಇಲಾಖೆಗೆ ವಾಪಸ್ ಕಳುಹಿಸಬೇಕು ಹಾಗೂ ಆ ಸ್ಥಾನಕ್ಕೆ ಸೂಕ್ತ ಆರ್ಹತೆ ಇರುವ ವ್ಯಕ್ತಿಯನ್ನು ನಿಯೋಜನೆ ಮಾಡಬೇಕು ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಒತ್ತಾಯಿಸಿದ್ದಾರೆ.

ಕಳೆದ ಆಗಷ್ಟ್‍ನಲ್ಲಿ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅನಿಯಮ ಜಾರಿಗೆ ತರಲಾಗಿದೆ. ಇದರ ಪ್ರಕಾರ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಸಹಾಯಕ ನಿರ್ದೇಶಕರು ಅಥವಾ ಜಂಟಿ ನಿರ್ದೇಶಕರ ಸ್ಥಾನಕ್ಕೆ ನಗರ ಯೋಜನೆ ವಿಷಯದಲ್ಲಿ ಸ್ನಾತಕ ಇಲ್ಲವೆ ಸ್ನಾತಕೋತ್ತರ ಪದವಿ ಪಡೆದಿರುವುದು ಕಡ್ಡಾಯ ಮಾಡಲಾಗಿದೆ.

ಆದರೆ, ಪ್ರಸ್ತುತ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮಂಜೇಶ್ ಅವರು ಕೇವಲ ಡಿ ಪ್ರೋಮೊ ವ್ಯಾಸಂಗ ಮಾಡಿರುವುದರಿಂದ ಅವರನ್ನು ಕೂಡಲೆ ಮಾತೃ ಇಲಾಖೆಗೆ ವಾಪಸ್ ಕಳುಹಿಸುವಂತೆ ರಮೇಶ್ ಮನವಿ ಮಾಡಿಕೊಂಡಿದ್ದಾರೆ.

ಕೆಟಿಸಿಪಿ ಕಾಯ್ದೆಗೆ ತಿದ್ದುಪಡಿಯಾಗಿ 100 ದಿನ ಕಳೆ ದರೂ ಮಂಜೇಶ್ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಗೌರವ್ ಗುಪ್ತಾ ಅವರು ಮನಸು ಮಾಡು ತ್ತಿಲ್ಲ. ಈ ಕುರಿತಂತೆ ಮುಖ್ಯ ಆಯುಕ್ತರ ವಿರುದ್ಧವೂ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.