ಹುಬ್ಬಳ್ಳಿಯಲ್ಲಿ ಪೂಜೆ ವಿಷಯಕ್ಕೆ ತಾರಕಕ್ಕೇರಿದ ಜಗಳ; ದೇವಸ್ಥಾನದಲ್ಲೇ ಪೂಜಾರಪ್ಪನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

ಹುಬ್ಬಳ್ಳಿಯಲ್ಲಿ ಪೂಜೆ ವಿಷಯಕ್ಕೆ ತಾರಕಕ್ಕೇರಿದ ಜಗಳ; ದೇವಸ್ಥಾನದಲ್ಲೇ ಪೂಜಾರಪ್ಪನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

ಹುಬ್ಬಳ್ಳಿ: ಜಿಲ್ಲೆಯ ಕಂಪ್ಲಿಕೊಪ್ಪ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕಾಗಿ ಪೂಜಾರಪ್ಪನ್ನು ಸ್ಥಳೀಯರೇ ದೇವಾಸ್ಥಾನದಲ್ಲಿ ಹೊಡೆದಿರುವ ಘಟನೆ ನಡೆದಿದೆ.ಬಸವಣ್ಣ ದೇವಸ್ಥಾನದ ಅರ್ಚಕ ಪ್ರಕಾಶ್ ಕುಂದಗೋಳಮಠ ಎಂಬುವರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

ಅರ್ಚಕ ಮತ್ತು ಗ್ರಾಮಸ್ಥರ ನಡುವೆ ಪೂಜೆಯ ವಿಚಾರವಾಗಿ ಗಲಾಟೆ ನಡೆದಿದೆ. ಆದರೆ ಅದು ವಿಕೋಪಕ್ಕೆ ಹೋಗಿ ಅರ್ಚಕ ಮನಬಂದಂತೆ ಥಳಿಸಿದ್ದಾರೆ.ಬಸವಣ್ಣ ದೇವಸ್ಥಾನದಲ್ಲಿ ಪೂಜಾರಪ್ಪ ಪ್ರಕಾಶ್ ಕುಂದಗೋಳಮಠ ತುಂಬಾ ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಅರ್ಚಕನ ನಡವಳಿಕೆಯಲ್ಲಿ ಬದಲಾವಣೆಯಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟು ಹೊಸ ಅರ್ಚಕರ ನೇಮಕಕ್ಕೆ ಚಿಂತನೆ ನಡೆಸಿದ್ದರು.

ಆದರೆ ಗ್ರಾಮಸ್ಥರ ಈ ನಿರ್ಧಾರಕ್ಕೆ ಪ್ರಕಾಶ್ ಒಪ್ಪಿಗೆ ನೀಡಿರಲಿಲ್ಲ. ಈ ವಿಚಾರಕ್ಕೆ ದೇವಸ್ಥಾನ ಆವರಣದಲ್ಲಿ ಗಲಾಟೆ ಆರಂಭವಾಗಿ, ಜಗಳ ತಾರಕಕ್ಕೇರಿ ಅರ್ಚಕ ಪ್ರಕಾಶ್‌ಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತಮ್ಮ ತಂದೆಯನ್ನು ಬಿಡಿಸಲು ಮುಂದಾದ ಅರ್ಚಕನ ಮಗನಿಗೂ ಗ್ರಾಮಸ್ಥರು ಥಳಿಸಿದ್ದಾರೆ. ಈ ವೇಳೆ ನೋಡಿದಾ ಅರ್ಚಕ ಮಗ ಮಧ್ಯಪ್ರವೇಶಿಸಿ ಬಿಡಿಸಲು ಹೋಗಿದ್ದು, ಆತನಿಗೂ ಗ್ರಾಮಸ್ಥರು ಹೊಡೆದಿದ್ದಾರೆ.