ಪಿಎಂ ಕಿಸಾನ್ ಸಮ್ಮಾನ್ ನಿಧಿ 13 ನೇ ಕಂತು ಯಾವಾಗ ಬಿಡುಗಡೆ ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ : ಸರ್ಕಾರವು ಇತ್ತೀಚೆಗೆಷ್ಟೇ (PM Kisan Samman Nidhi)ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ 12 ನೇ ಕಂತನ್ನು ಬಿಡುಗಡೆ ಮಾಡಿದೆ. ಈಗ ರೈತರು ಯೋಜನೆಯ ಮುಂದಿನ ಅಥವಾ 13 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ಎಲ್ಲಾ ಭೂ ಹಿಡುವಳಿ ರೈತರ ಕುಟುಂಬಗಳಿಗೆ ವಾರ್ಷಿಕ 6,000 ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಒದಗಿಸಲಾಗಿದೆ.
PM ಕಿಸಾನ್ 13 ನೇ ಕಂತು ಬಿಡುಗಡೆ ದಿನಾಂಕ :
PM ಕಿಸಾನ್(PM Kisan) 13 ನೇ ಕಂತುನ್ನು ಡಿಸೆಂಬರ್ 15 ರಿಂದ 20 ವರೆಗೆ pmkisan.gov.in ನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೊದಲು ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಗ್ಗೆ ಸರಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿರುವುದಿಲ್ಲ.
ಪಿಎಂ ಕಿಸಾನ್ ಯೋಜನೆ 13 ನೇ ಕಂತಿಗೆ ನೋಂದಾಯಿಸುವ ವಿಧಾನ :
ಪಿಎಂ ಕಿಸಾನ್ ಯೋಜನೆ 13 ನೇ ಕಂತಿಗೆ ಎರಡು ಮಾರ್ಗಗಳಲ್ಲಿ ನೋಂದಾಯಿಸಬಹುದಾಗಿದೆ. ಒಂದು ಆಫ್‌ಲೈನ್ ಮತ್ತು ಇನ್ನೊಂದು ಆನ್‌ಲೈನ್ ಮೂಲಕ ನೋಂದಾಯಿಸಬಹುದಾಗಿದೆ.
PM ಕಿಸಾನ್ ಸಮ್ಮಾನ್ ನಿಧಿ 13 ನೇ ಕಂತಿಗೆ ಆಫ್‌ಲೈನ್ ನೋಂದಣಿ ವಿಧಾನ :
ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಲು ರೈತರು ಸ್ಥಳೀಯ ಕಂದಾಯ ಅಧಿಕಾರಿ (ಪಟ್ವಾರಿ) ಅಥವಾ ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ನೋಡಲ್ ಅಧಿಕಾರಿಯನ್ನು ಭೇಟಿ ಮಾಡಬೇಕಾಗುತ್ತದೆ. ಅದು ಅಲ್ಲದೇ ರೈತರು ನೋಂದಣಿಗಾಗಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳನ್ನು (CSC) ಸಂಪರ್ಕಿಸಬಹುದಾಗಿದೆ. ರೈತರು ನೋಂದಾವಣಿಗೆ ಮಾಡಬೇಕಾಗಿರುವುದು ಎಲ್ಲಾ ಪ್ರಮುಖ ದಾಖಲೆಗಳನ್ನು ಕೊಂಡೊಯ್ಯುವುದು ಮತ್ತು ಅದನ್ನು CSC ಯ ಉಸ್ತುವಾರಿ ಅಧಿಕಾರಿಗೆ ಸಲ್ಲಿಸಬೇಕಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ 13ನೇ ಕಂತಿಗೆ ಆನ್‌ಲೈನ್ ನೋಂದಣಿ ವಿಧಾನ :
ಹಂತ 1 : pmkisan.gov.in ಗೆ ಲಾಗ್‌ಇನ್ ಆಗಬೇಕು
ಹಂತ 2 : ಮುಖಪುಟದಲ್ಲಿ ‘ಫಾರ್ಮರ್ಸ್ ಕಾರ್ನರ್’ ವಿಭಾಗದ ಅಡಿಯಲ್ಲಿ ‘ಫಲಾನುಭವಿ ಸ್ಥಿತಿ’ ಆಯ್ಕೆಯನ್ನು ಆಯ್ಕೆಮಾಡಬೇಕು.
ಹಂತ 3 : ನೋಂದಾಯಿತ ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿಬೇಕು.
ಹಂತ 4 : ‘ಡೇಟಾ ಪಡೆಯಿರಿ’ ಮೇಲೆ ಕ್ಲಿಕ್ ಮಾಡಬೇಕು.
ಹಂತ 5 : ಕಂತಿನ ಸ್ಥಿತಿಯನ್ನು ಪ್ರದರ್ಶಿಸಲಾಗುತ್ತದೆ.
ಗಮನಿಸಬೇಕಾದ ವಿಷಯವೆನೆಂದರೆ ರೈತರು ತಮ್ಮ ಇಕೆವೈಸಿಯನ್ನು ಇನ್ನೂ ಪೂರ್ಣಗೊಳಿಸದೇ ಇದ್ದರೆ 13 ನೇ ಕಂತು ಮೊತ್ತವನ್ನು ಸ್ವೀಕರಿಸಲು ಆಗುವುದಿಲ್ಲ. ಪಿಎಂ ಕಿಸಾನ್ ವೆಬ್‌ಸೈಟ್ ಪ್ರಕಾರ, "ಪಿಎಂಕಿಸಾನ್ ನೋಂದಾಯಿತ ರೈತರಿಗೆ eKYC ಕಡ್ಡಾಯವಾಗಿದೆ. PMKISAN ಪೋರ್ಟಲ್‌ನಲ್ಲಿ OTP ಆಧಾರಿತ eKYC ಲಭ್ಯವಿರುತ್ತದೆ. ಅಥವಾ ಬಯೋಮೆಟ್ರಿಕ್ ಆಧಾರಿತ eKYC ಗಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.
ಪಿಎಂ ಕಿಸಾನ್‌ನ ಇ-ಕೆವೈಸಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸುವ ವಿಧಾನ :
PM ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು eKYC ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಆಧಾರ್ ಕಾರ್ಡ್ ಸಂಖ್ಯೆ, ಕ್ಯಾಪ್ಚಾ ಕೋಡ್ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿಬೇಕು.
OTP ಸ್ವೀಕರಿಸಿ ಅದನ್ನು ನಮೂದಿಸಿದ ನಂತರ ಯಶಸ್ವಿ ಪರಿಶೀಲನೆಯಲ್ಲಿ eKYC ಪೂರ್ಣಗೊಳ್ಳುತ್ತದೆ.
13ನೇ ಕಂತಿಗೆ ಪಡಿತರ ಚೀಟಿ ನಕಲು ಪ್ರತಿ ಕಡ್ಡಾಯ :
ಪಿಎಂ ಕಿಸಾನ್ ಯೋಜನೆಯ ಮುಂಬರುವ ಕಂತು ಪಡೆಯಲು ರೈತರು ನೋಂದಣಿಗಾಗಿ ಪಡಿತರ ಚೀಟಿಯ ಪ್ರತಿಯನ್ನು ಒದಗಿಸಬೇಕು. ರೈತರು ಪಡಿತರ ಚೀಟಿಯ ಹಾರ್ಡ್ ಕಾಪಿಯನ್ನು ನೀಡುವ ಅಗತ್ಯವಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಪಡಿತರ ಚೀಟಿಯ ಸಾಫ್ಟ್ ಕಾಪಿಯ ಪಿಡಿಎಫ್‌ಯನ್ನು ಮಾತ್ರ ಅಪ್‌ಲೋಡ್ ಮಾಡಬೇಕಾಗುತ್ತದೆ.
ಟಿ ನೀಡಬೇಕು. ನೀವು PDF ಫೈಲ್ ಅನ್ನು ರಚಿಸಿ ಹಾಗೂ ನಿಮ್ಮ ಪಡಿತರ ಚೀಟಿಯ ಸಾಫ್ಟ್ ಕಾಪಿಯನ್ನು ಅಲ್ಲಿ ಸಲ್ಲಿಸಬೇಕಾಗಿದೆ. ಪಡಿತರ ಚೀಟಿಯ ನಕಲು ಪ್ರತಿ ನೀಡದಿದ್ದರೆ ರೈತರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.