ಮೈ ಕೊರೆವ ಚಳಿಯಲ್ಲೂ ʻಧೋತಿʼ ಧರಿಸಿ ʻಭಾರತ್ ಜೋಡೋ ಯಾತ್ರೆʼಯಲ್ಲಿ ಹೆಜ್ಜೆ ಹಾಕಿದ ಬಾಲಕ, ರಾಹುಲ್‌ ವಿರುದ್ಧ ಬಿಜೆಪಿ ಕಿಡಿ

ಮೈ ಕೊರೆವ ಚಳಿಯಲ್ಲೂ ʻಧೋತಿʼ ಧರಿಸಿ ʻಭಾರತ್ ಜೋಡೋ ಯಾತ್ರೆʼಯಲ್ಲಿ ಹೆಜ್ಜೆ ಹಾಕಿದ ಬಾಲಕ, ರಾಹುಲ್‌ ವಿರುದ್ಧ ಬಿಜೆಪಿ ಕಿಡಿ

ವದೆಹಲಿ: ಭಾರತ್ ಜೋಡೋ ಯಾತ್ರೆ(Bharat Jodo Yatra)ಯಲ್ಲಿ ರಾಹುಲ್‌ ಗಾಂಧಿ ಜೊತೆ ಮಗುವೊಂದು ಚಳಿಯಲ್ಲಿ ಧೋತಿಯನ್ನು ಮಾತ್ರ ಧರಿಸಿ ನಡೆದುಕೊಂಡು ಹೋಗುತ್ತಿರುವ ಫೋಟೋವೊಂದು ವೈರಲ್‌ ಆಗುತ್ತಿದ್ದು, ರಾಹುಲ್‌ ಬಿಜೆಪಿ ಟೀಕೆಗೆ ಗುರಿಯಾಗಿದ್ದಾರೆ.

ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಕೈ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ. ʻಕೇವಲ ಧೋತಿಯನ್ನು ಮಾತ್ರ ಧರಿಸಿ ಆಡುವ ಮಗುವಿನೊಂದಿಗೆ ಗಾಂಧಿ ಕುಡಿ ಕೈ ಹಿಡಿದು ನಡೆಯುತ್ತಿರುವ ಚಿತ್ರʼವನ್ನು ಟ್ವೀಟ್ ಮಾಡಿದ್ದಾರೆ.

'4 ಡಿಗ್ರಿ ತಾಪಮಾನದಲ್ಲಿ, ನಾಚಿಕೆಗೇಡಿನ ವ್ಯಕ್ತಿ ಮಾತ್ರ ಮಗುವನ್ನು ರಾಜಕೀಯಕ್ಕಾಗಿ ಬಟ್ಟೆಯಿಲ್ಲದೆ ತಿರುಗುವಂತೆ ಮಾಡಬಹುದು' ಎಂದು ಬಗ್ಗಾ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಮಗುವಿನೊಂದಿಗೆ ಕೇವಲ ಧೋತಿಯನ್ನು ಧರಿಸಿರುವ ಫೋಟೋವನ್ನು ಶೀರ್ಷಿಕೆ ಬರೆದ್ದಾರೆ.

ಈ ಮಧ್ಯೆ, ಚಳಿಯಲ್ಲಿ ಶರ್ಟ್ ಅಥವಾ ಟಿ-ಶರ್ಟ್ ಇಲ್ಲದೆ ಮಗುವಿನೊಂದಿಗೆ ರಾಹುಲ್ ಗಾಂಧಿ ನಡೆದುಕೊಂಡು ಹೋಗುತ್ತಿರುವುದಕ್ಕೆ ವಕೀಲೆ ಚಾಂದಿನಿ ಪ್ರೀತಿ ವಿಜಯಕುಮಾರ್ ಶಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ (NCPCR) ಪತ್ರ ಬರೆದಿದ್ದಾರೆ.

ಕೊರೆಯುವ ಚಳಿಯಲ್ಲೂ ಬಿಳಿ ಟೀ ಶರ್ಟ್ ಧರಿಸಿ ರಾಹುಲ್ ಗಾಂಧಿ ಉತ್ತರ ಭಾರತದಲ್ಲಿ ಭಾರತ್ ಜೋಡೋ ಯಾತ್ರೆ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಅವರು ಟೀ ಶರ್ಟ್‌ನಲ್ಲಿದ್ದಾರೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಗಾಂಧಿ ವಂಶಸ್ಥರು, ಪ್ರತಿಯೊಬ್ಬರೂ ಅವರ ಉಡುಪನ್ನು ಎತ್ತಿ ತೋರಿಸುತ್ತಿದ್ದಾರೆ. ಆದರೆ, 'ಬಡ ರೈತರು ಮತ್ತು ಕಾರ್ಮಿಕರು ಹರಿದ ಬಟ್ಟೆಯಲ್ಲಿ ತಮ್ಮೊಂದಿಗೆ ನಡೆಯುವುದನ್ನು ಗಮನಿಸುವುದಿಲ್ಲ' ಎಂದು ಹೇಳಿದರು